ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ವಲಯ ಅರಣ್ಯಾಧಿಕಾರಿ ಶರತ್‌ ಶೆಟ್ಟಿಗೆ ಜೀವ ಬೆದರಿಕೆ

ಭಟ್ಕಳ ವಲಯ ಅರಣ್ಯಾಧಿಕಾರಿ ಶರತ್‌ ಶೆಟ್ಟಿಗೆ ಜೀವ ಬೆದರಿಕೆ

Mon, 25 Sep 2023 01:22:32  Office Staff   so news

ಭಟ್ಕಳ: ಭಟ್ಕಳ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಶರತ್‌ ಶೆಟ್ಟಿಗೆ ಅನಾಮಿಕ ವ್ಯಕ್ತಿಯೋರ್ವರು ವಾಟ್ಸಪ್‌ನಲ್ಲಿ ಜೀವ ಬೆದರಿಕೆಯ ಸಂದೇಶಗಳನ್ನು ರವಾನಿಸಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಕಳೆದ ಸೆ.19ರ ರಾತ್ರಿ ಆರ್‌ಎಫ್‌ಓ ಶರತ್ ಶೆಟ್ಟಿ  +1(334)581-4044 ನಂಬರಿನಿಂದ ಆರ್‌ಎಫ್‌ಓ ಶರತ್ ಶೆಟ್ಟಿಯವರ ವಾಟ್ಸಪ್ ನಂಬರಿಗೆ ವೈಯಕ್ತಿಕ ಜೀವನ, ಸಾರ್ವಜನಿಕರೊಂದಿಗಿನ ಸಂಬಂಧ ಮತ್ತು ವೃತ್ತಿ ಜೀವನವನ್ನು ಹಾಳುಮಾಡುತ್ತೇವೆ. ಎಂದು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. ತಾನು ಕಳೆದ 5 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಭಟ್ಕಳದಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವಾರು ಅತಿಕ್ರಮಣ ಖುಲ್ಲಾ ಪಡಿಸಲಾಗಿದೆ. ಅಲ್ಲದೇ ಹಗಲು ರಾತ್ರಿ ಎನ್ನದೇ ಅರಣ್ಯದಲ್ಲಿ ನಡೆಯುತ್ತಿದ್ದ ಹಲವಾರು ಅಕ್ರಮಗಳನ್ನು ತಡೆದು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಸದರಿ ಶಿಕ್ಷೆಗಳಿಗೆ ಒಳಪಟ್ಟವರ ಪೈಕಿ ಯಾರೋ ತನ್ನ ಆತ್ಮಸ್ಥೆರ್ಯ ಕುಗ್ಗಿಸಲು ಈ ರೀತಿ ಮಾಡಿರಬಹುದು. ಈ ಸಂದೇಶಗಳಿಂದ ತಾನು ಮಾನಸಿಕವಾಗಿ ನೊಂದಿರುವುದಾಗಿ ಶರತ್‌ ಶೆಟ್ಟಿ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಭಾರತ ದಂಡ ಸಂಹಿತೆ ಕಲಂ 507ನೇದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 


Share: