ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ರೈಲು ನಿಲ್ದಾಣದ ಬಳಿ ಮೃತದೇಹ ಪತ್ತೆ

ಭಟ್ಕಳ ರೈಲು ನಿಲ್ದಾಣದ ಬಳಿ ಮೃತದೇಹ ಪತ್ತೆ

Fri, 13 Jan 2023 18:34:57  Office Staff   SOnews

ಭಟ್ಕಳ: ಭಟ್ಕಳ ರೈಲು ನಿಲ್ದಾಣದ ಬಳಿಯ ಚರಂಡಿಯ ದಡದಲ್ಲಿ ವ್ಯಕ್ತಿಯೊಬ್ಬರ  ಮೃತದೇಹ ಪತ್ತೆಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮೃತ ವ್ಯಕ್ತಿಯನ್ನು  ಹರಿಯಾಣ ಮೂಲದ ಬಾಲ ಚಂದ್ರಾನಂದ್ (58) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.


Share: