ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ದಿನಾಚರಣೆ

ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ದಿನಾಚರಣೆ

Fri, 15 Apr 2022 00:09:41  Office Staff   SO News

ಭಟ್ಕಳ : ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹುಟ್ಟುಹಬ್ಬವನ್ನು ಗುರುವಾರ ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಆಚರಿಸಲಾಯಿತು. 

ಈ ವೇಳೆ ಪಕ್ಷದ ಮುಖಂಡರು ಅಂಬೇಡ್ಕರ್ ಫೋಟೋಗೆ ಪುಷ್ಪಾರ್ಚನೆ ಮಾಡಿ ಭಾರತ ರತ್ನ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.

ಸಭೆಯಲ್ಲಿ ಭಟ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಷ್ಣು ದೇವಾಡಿಗ, ಕಾಂಗ್ರೆಸ್ ಹಿರಿಯ ಮುಖಂಡ ಟಿ ಡಿ ನಾಯ್ಕ್, ರಾಘವೇಂದ್ರ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ನಾರಾಯಣ ನಾಯ್ಕ್ ಖಜಾಂಜಿ ದೇವಿದಾಸ್ ಆಚಾರಿ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ್, ಜಿಲ್ಲಾ ಕಾರ್ಮಿಕ ಸೆಲ್ ಪ್ರಧಾನ ಕಾರ್ಯದರ್ಶಿ ಮಹೇಶ್ ನಾಯ್ಕ್, ಸೇವಾದಳ ದ ಅಧ್ಯಕ್ಷ ರಾಜೇಶ್ ನಾಯ್ಕ್,  ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸದಸ್ಯ ವೆಂಕಟೇಶ್ ಹಳ್ಳೆರ್, ಭಟ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ  ಸತೀಶ್ ಆಚಾರಿ, ಜಾಲಿ ಪಟ್ಟಣ ಪಾಚಾಯತ್ ಮಾಜಿ ಸದಸ್ಯರಾದ ಮಂಗಳ ಗೊಂಡ, ಗಣೇಶ ಗೊಂಡ ಹದ್ಲುರು, ಗೊಂಡ ಸಮಾಜದ ಮುಖಂಡ ಕೃಷ್ಣ ಗೊಂಡ ಹದ್ಲೂರ್, ಆಸೀಫ್, ಆರಿಫ್, ಕಾಂಗ್ರೆಸ್ ಭೂತ್ ಎನ್ರೋಲರ್ ಆದ ಮಹಮ್ಮದ್ ಅಸ್ಲಾಂ, ಮೊಹಮ್ಮದ್ ಸಯ್ಯದ್, ಮುಂತಾದವರು ಹಾಜರಿದ್ದರು.


Share: