ಭಟ್ಕಳ : ಭಟ್ಕಳ ಪುರಸಭೆಯ ಅಧ್ಯಕ್ಷ ಪರ್ವೇಜ ಕಾಶೀಂಜಿ ೪ ಲಕ್ಷದ ೯೧ ಸಾವಿರದ ಉಳಿತಾಯದ ಬಜೆಟ್ ಮಂಡನೆ ಮಾಡಿದ್ದಾರೆ.
ಮಂಗಳವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ೨೦೨೩-೨೪ನೇ ಸಾಲಿನ ಆಯ-ವ್ಯಯ ಮಂಡನೆ ಮಾಡಿದರು. ೨೦೨೩-೨೪ನೇ ಸಾಲಿನಲ್ಲಿ ಮನೆ ಆಸ್ತಿ ಕರದಿಂದ ೧ಕೋಟಿ ೩೨ ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆಯಿಂದ ೬೬ ಲಕ್ಷ, ಕಟ್ಟಡ ಪರವಾನಿಗೆಯಿಂದ ಶುಲ್ಕ ೫ ಲಕ್ಷ, ನೀರು ಹಾಗೂ ಒಳಚಂರಡಿ ಶುಲ್ಕದಿಂದ ೧೨,೫೦ಲಕ್ಷ, ಖಾತೆ ಬದಲಾವಣೆಯಿಂದ ೨ಲಕ್ಷ, ಮಾರುಕಟ್ಟೆ ಫೀ ವಸೂಲಿಯಿಂದ ೧೬,೯೦ ಲಕ್ಷ, ಎಸ್.ಎಫ್.ಸಿ ಸಂಬಳ ಅನುದಾನದಿಂದ ೨ಕೋಟಿ ೪೪ ಲಕ್ಷ, ವಿದ್ಯುತ್ ಬಿಲ್ ಪಾವತಿಗಾಗಿ ಎಸ್.ಎಫ.ಸಿ ಅನುದಾನದಿಂದ ೧ಕೋಟಿ ೯೫ ಹಾಗೂ ಬ್ಯಾಂಕ ಬಡ್ಡಿಯಿಂದ ೨೬ ಲಕ್ಷ ಅನುದಾನ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟೂ ೮ ಕೋಟಿ ೫೭ ಲಕ್ಷ ಅನುದಾನ ನಿರೀಕ್ಷೆ ಮಾಡಲಾಗಿದ್ದು, ಒಟ್ಟೂ ೮ ಕೋಟಿ ೫೨ ಲಕ್ಷ ಖರ್ಚು ಕಳೆದು, ೨೦೨೩-೨೪ನೇ ಸಾಲಿನಲ್ಲಿ ಪುರಸಭೆಗೆ ೪ ೪ಲಕ್ಷದ ೯೧ ಸಾವಿರದ ಉಳಿತಾಯ ನಿರೀಕ್ಷಿಸಿದ ಬಜೆಟ್ ಅಧ್ಯಕ್ಷ ಪರ್ವೇಜ್ ಕಾಶೀಜಿ ಮಂಡನೆ ಮಾಡಿದರು. ಉಳಿದ ಸದಸ್ಯರು ಬಜೆಟ್ ಗೆ ಅನುಮೋದನೆ ನೀಡಿದರು.
ಮಳೆಗಾಲದ ಪೂರ್ವದಲ್ಲಿ ಚರಂಡಿಯ ಹೂಳೆತ್ತುವಂತೆ ಸದಸ್ಯರು ಆಗ್ರಹಿಸಿದರು. ಪಟ್ಟಣದಲ್ಲಿ ಸಿಸಿ ಕ್ಯಾಮಾರ ಕೆಟ್ಟು ನಿಂತಿದ್ದು, ಅಹಿತಕರ ಘಟೆನೆಗಳು ನಡೆದಾಗ ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಈ ಹಿಂದಿನೆ ಸಭೆಯಲ್ಲಿ ನಿರ್ಧರಿಸದಂತೆ ಕೆಟ್ಟು ನಿಂತ ಕ್ಯಾಮರಾಗಳನ್ನು ರಿಪೇರಿ ಮಾಡಲು ಪುರಸಭೆ ಕ್ರಮವಹಿಸಬೇಕು ಎಂದು ಸದಸ್ಯ ಶ್ರೀಕಾಂತ ನಾಯ್ಕ ಆಗ್ರಹಿಸಿದರು. ಪರಿಷ್ಕçತ ಟ್ರೇಡ್ ಲೈಸೆನ್ಸ ಮೊತ್ತವನ್ನು ದುಪ್ಪಟ್ಟು ಮಾಡಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹಿಸಲು ಪುರಸಭೆಯಿಂದ ಎರಡು ಉಚಿತ ಬಕೆಟ್ ವಿತರಿಸುವುದಾಗಿ ಮುಖ್ಯಾಧಿಕಾರಿಗಳು ಸಭೆಯ ಗಮನಕ್ಕೆ ತಂದರು,
ಸ್ಥಾಯಿ ಸಮಿತಿ ಅಧ್ಯಕ್ಷ ಅಜೀಮ್, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತಿç, ಇಂಜಿನೀಯರ್ ಅರವಿಂದ ಇದ್ದರು.