ಅನಾಥವಾಗಿರುವ ಉಗ್ರರ ದಾಳಿಗೆ ಬಲಿಯಾದ ಬಿಎಸ್‌ಎಫ್ ಯೋಧನ ಮಕ್ಕಳು
ದೇಶವು ಶನಿವಾರ ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿರುವಾಗಲೇ, ಜಮ್ಮುಕಾಶ್ಮೀರದಲ್ಲ್ಲಿ ಉಗ್ರರಿಂದ ಹತನಾದ ಬಿಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬನ ಅನಾಥ ಮಕ್ಕಳ ಹೃದಯವಿದ್ರಾವಕ ಕಥೆಯೊಂದು ಬೆಳಕಿಗೆ ಬಂದಿದೆ.
ಉಗ್ರರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ೮ ವರ್ಷ ಪ್ರಾಯದ ಅಬ್ರಾರ್ ಗುಂಡಿನ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಆತನ ಪಾಲನೆ, ಪೋಷಣೆಯ ಹೊಣೆ ಹಿರಿಯ ಸೋದರ ಇರ್ಫಾನ್‌ನ ಬಗಲಿಗೆ ಬಿದ್ದಿದೆ.
ಈ ಇಬ್ಬರು ಅಣ್ಣತಮ್ಮಂದಿರ ತಂದೆ ಹಾಗೂ ತಾಯಿ ಉಗ್ರರ ಗುಂಡಿಗೆ ಬಲಿಯಾದ ಏಳು ದಿನಗಳ ಬಳಿಕವೂ ಈ ಅನಾಥ ಬಾಲಕರಿಗೆ ನೆರವಾಗಲು ಸರಕಾರ ಮುಂದೆ ಬಂದಿಲ್ಲ.ಈ ಮಕ್ಕಳ ತಂದೆ ಮೊದಲು ಉಗ್ರಗಾಮಿಯಾಗಿದ್ದು, ಭದ್ರತಾಪಡೆಗಳಿಗೆ ಆತ ಶರಣಾಗತನಾದ ಬಳಿಕ ಆತನನ್ನು ಬಿಎಸ್‌ಎಫ್ ಪಡೆಗೆ ಸೇರಿಸಿಕೊಳ್ಳಲಾಯಿತು.
ತನ್ನ ತಂದೆ ನೂರ್ ಮುಹಮ್ಮದ್‌ನ ಸಾವಿನ ಆಘಾತದಿಂದ ಪುಟಾಣಿ ಅಬ್ರಾರ್ ಇನ್ನೂ ಕೂಡಾ ಹೊರಬಂದಿಲ್ಲ. ಆತನ ಸೋದರ ಇರ್ಫಾನ್ ಹತ್ಯಾಕಾಂಡವನ್ನು ನೆನಸಿಕೊಂಡೇ ಬೆಚ್ಚಿಬೀಳುತ್ತಾನೆ.
“ನನ್ನ ತಂದೆಯನ್ನು ಉಗ್ರಗಾಮಿಗಳು ಮನೆಯಿಂದ ಹೊರಗೆ ಕೊಂಡೊಯ್ದರು. ಭಯೋತ್ಪಾದನೆಯ ತಪ್ಪು ದಾರಿಯಾಗಿದ್ದು, ಹಾಗಾಗಿ ತಾನು ಶರಣಾಗ ತನಾದೆನೆಂದು ನನ್ನ ತಂದೆ ಅವರಿಗೆ ತಿಳಿಸಿದ.ಆತ ಶರಣಾಗತನಾಗಿರುವುದರಿಂದ ಆತನನ್ನು ನಾವು ಕೊಲ್ಲುತ್ತೇವೆಂದು ಉಗ್ರರು ಹೇಳಿದರು. ಈಗ ನಾನು ಒಬ್ಬಂಟಿ ಜೊತೆಗೆ ಬಡತನ ಬೇರೆ. ನಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ” ಎಂದು ಇರ್ಫಾನ್ ಹೇಳುತ್ತಾನೆ.
ಅಬ್ರಾರ್‌ನ ತಂದೆ ಬಿಎಸ್‌ಎಫ್ ಕಾನ್ಸ್‌ಟೇಬಲ್ ಆಗಿದ್ದು, ಭಯೋತ್ಪಾದನಾ ನಿಗ್ರಹ ಕಾರ್ಯಾ ಚರಣೆಗಳಲ್ಲಿ ಪಾಲ್ಗೊಂಡಿದ್ದ. ಹಿಜ್ಬುಲ್ ಮುಜಾ ಹಿದ್ದೀನ್ ಉಗ್ರನಾಗಿದ್ದ ೩೮ ವರ್ಷ ಪ್ರಾಯದ ನೂರ್ ಮುಹಮ್ಮದ್ ೨೦೦೧ರಲ್ಲಿ ಶರಣಾಗತನಾಗಿದ್ದ. ಆತನನ್ನು ಬಿಎಸ್‌ಎಫ್ ಕಾನ್ಸ್‌ಟೇಬಲ್ ಆಗಿ ನೇಮಕ ಮಾಡಿಕೊಳ್ಳಲಾಯಿತು.
ಕಾಶ್ಮೀರಿ ಉಗ್ರಗಾಮಿಗಳ ವಿರುದ್ಧ ನಡೆದ ಹಲವು ಯಶಸ್ವಿ ಕಾರ್ಯಾಚರಣೆಗಳಲ್ಲಿ ನೂರ್ ಮುಹಮ್ಮದ್ ಬಿಎಸ್‌ಎಫ್ ಬಹಳಷ್ಟು ನೆರವಾಗಿದ್ದ. ಹಾಗಾಗಿ ಹಿಜ್ಬುಲ್ ಮುಜಾಹಿದ್ದೀನ್‌ನ ಹಿಟ್‌ಲಿಸ್ಟ್‌ನಲ್ಲಿದ್ದ ನೆಂದು ಹೆಚ್ಚುವರಿ ಎಸ್ಪಿ ಮುಹಮ್ಮದ್ ಶಬೀರ್ ಹೇಳುತ್ತಾರೆ. ಇದು ಭಾರತದ ದುರಂತ. ಏನಂತೀರಾ?
-ಶಂಶೀರ್ ಶಫಮಾ