ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಚೌಥನಿ ಕಾಸ್ಟುಡಿ ಶ್ರೀ ಹನುಮಂತ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪ ಲೋಕಾರ್ಪಣೆ

ಭಟ್ಕಳ ಚೌಥನಿ ಕಾಸ್ಟುಡಿ ಶ್ರೀ ಹನುಮಂತ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪ ಲೋಕಾರ್ಪಣೆ

Mon, 09 May 2022 05:42:24  Office Staff   SO NEWS

ಭಟ್ಕಳ: ನಗರದ ಚೌಥನಿಯಲ್ಲಿರುವ ಕಾಸ್ಮುಡಿ ಶ್ರೀ ಹನುಮಂತ ದೇವಾಸ್ಥಾನದ ಸ್ಯಯಂವರ ಕಲ್ಯಾಣ ಮಂಟಪವನ್ನು ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು 
ಕಾಸ್ಮುಡಿ ದೇವಸ್ಥಾನದ ಸ್ಯಯಂವರ ಕಲ್ಯಾಣ ಮಂಟಪ ಈ ಭಾಗದ ಜನರ ಶ್ರಮದ ಪ್ರತೀಕವಾಗಿದ್ದು ಕಾರ್ಯಕರ್ತರ ಶ್ರಮ ಅಭಿನಂದನೀಯ. ಯಾವುದೇ ಒಂದು ಕಾರ್ಯ ಆಗಬೇಕಾದರೆ ಸಹಕಾರ ಹಣ ಸಾಲದು ಬದಲಿಗೆ ಇಚ್ಚಾಶಕ್ತಿಯ ಅಗತ್ಯತೆ ಇದೆ ಅದನ್ನು ಇಲ್ಲಿ ನಾವು ನೊಡಿದ್ದೇವೆ ಎಂದರು. ಜನರಿಂದಲೇ ನಿರ್ಮಾಣವಾದ ಈ ಕಲ್ಯಾಣ ಮಂಟಪ ಬಡ ಜನತೆಯ ಮುದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಸಹಾಯವಾಗಲಿ ಎಂದು ಹಾರೈಸಿದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂದಾಪುರದ ವಕೀಲ ಪ್ರದೀಪಕುಮಾರ ಶೆಟ್ಟಿ ದೇವಾಲಯಗಳು, ಶೃದ್ಧಾ ಭಕ್ತಿಯ ಕೇಂದ್ರಗಳಿಂದ ಬಡ ಜನತೆಗೆ ಮನೆ ಕಟ್ಟಿಕೊಡುವುದು, ಶಿಕ್ಷಣಕ್ಕೆ ಸಹಾಯ ಮಾಡುವುದು ಅತ್ಯಂತ ಸ್ಮರಣೀಯ ಕಾರ್ಯ ಅದರಂತೆಯೇ ಅವರ ಕಾರ್ಯಕ್ರಮಕ್ಕೆ ಅತ್ಯಂತ ಕನಿಷ್ಟ ಶುಲ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಕೊಟ್ಟಿರುವ ದೇವಸ್ಥಾನದ ಕಮಿಟಿಯ ಕಾರ್ಯ ಕೂಡಾ ಶ್ಲಾಘನೀಯ ಎಂದರು. ಸಮಾಜದಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿ ಕಲ್ಯಾಣ ಮಂಟಪಗಳನ್ನು ಕಟ್ಟಿ ಭಾಡಿಗೆಯಿಂದ ಲಾಭ ಮಾಡುವ ಉದ್ದೇಶವನ್ನಿಟ್ಟುಕೊಂಡವರು ಒಂದು ಕಡೆಯಾದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯವಾಗಲೆಂದು ಈ ರೀತಿಯ ಕಲ್ಯಾಣ ಮಂಟಪಗಳನ್ನು ಕಟ್ಟುವವರು ಇನ್ನೊಂದು ಕಡೆ ಇದ್ದಾರೆ ಎನ್ನುವುದು ತುಂಬಾ ಸಂತಸವ ವಿಷಯ ಎಂದೂ ಅವರು ಹೇಳಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಗೌರವಾಧ್ಯಕ್ಷ ಈರಪ್ಪ ನಾಯ್ಕ ಗರ್ಡೀಕರ್ ವಹಿಸಿದ್ದರು.                                                                                                                            
ವೇದಿಕೆಯಲ್ಲಿ ಬಾಲಚಂದ್ರ ಭಟ್ಟ ಚೋಳೇಶ್ವರ, ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಡಿ.ಬಿ. ನಾಯ್ಕ ಜಾಲಿ, ಯಲ್ವಡಿಕವೂರು ಗ್ರಾ.ಪ0. ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ದಾನಿಗಳಾದ ಎಚ್.ಆರ್. ನಾಯ್ಕ ಕುಮಟಾ, ದೇವಸ್ಥಾನದ ಉಪಾಧ್ಯಕ್ಷ ಮೃತ್ಯುಂಜಯ ಆಚಾರ್ಯ, ಚಂದ್ರ ಎಂ. ನಾಯ್ಕ, ಕೇಶವ ಆಚಾರ್ಯ, ಕೃಷ್ಣಪ್ಪ ನಾಯ್ಕ, ಗಣಪತಿ ನಾಯ್ಕ, ಸುಬ್ರಾಯ ನಾಯ್ಕ, ಭಾಸ್ಕರ ನಾಯ್ಕ, ಚಂದ್ರು ಎಂ. ನಾಯ್ಕ, ಗಣಪತಿ ಗೊಂಡ ಮುಂತಾದವರು ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಸ್ಯಯಂವರ ಕಲ್ಯಾಣ ಮಂಟಪ ನಿರ್ಮಾಣದಲ್ಲಿ ಕರಸೇವೆ ಮಾಡಿದ ಹಾಗು ದಾನನೀಡಿದ ಮಹನೀಯರನ್ನ ಗೌರವಿಸಲಾಯಿತು.
ಕುಮಾರ ನಿಲೇಶ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು.  ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ನಾಯ್ಜ ಅಬ್ಬಿಹಿತ್ತಲ ಸ್ವಾಗತಿಸಿದರು. ಸನ್ಮಾನಿತರ ಪರವಾಗಿ ಪ್ರಕಾಶ ನಾಯ್ಕ ಅರಬ್ಯೆಲ್ ಮಾತನಾಡಿದರು. ಪರಮೇಶ್ವರ ನಾಯ್ಕ ನಿರೂಪಿಸಿದರು.


Share: