ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ:ಅನೈತಿಕ ಚಟುವಟಿಕೆ - ಏಳು ಜನರ ಬಂಧನ

ಉಡುಪಿ:ಅನೈತಿಕ ಚಟುವಟಿಕೆ - ಏಳು ಜನರ ಬಂಧನ

Sun, 21 Feb 2010 00:02:00  Office Staff   S.O. News Service
ಉಡುಪಿ, ಫೆಬ್ರವರಿ ೨೧: ದಿನಾಂಕ ೧೯/೦೨/೨೦೧೦ ರಂದು ರಾತ್ರಿ ೨೩:೦೦ ಗಂಟೆಗೆ ಉಡುಪಿಯ ಬೀಡಿನಗುಡ್ಡೆ ಎಂಬಲ್ಲಿ ಅನೈತಿಕ ವ್ಯವಹಾರದ ಬಗ್ಗೆ ಹೆಂಗಸರನ್ನು ಇಟ್ಟುಕೊಂಡು ಅನೈತಿಕ ಚಟುವಟಿಕೆಗೆ ಗಿರಾಕಿಗಳನ್ನು ಕುದುರಿಸುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಾರುತಿ ಜಿ. ನಾಯಕ್‌ರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಸ್ಥಳದಲ್ಲಿದ್ದ ೭ ಜನರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ನಗದು ರೂಪಾಯಿ ೮೦೦, ಅವರ ಬಳಿಯಿದ್ದ ಒಟ್ಟು ೬ ಮೊಬೈಲ್ ಸೆಟ್‌ಗಳನ್ನು ಮತ್ತು ಸ್ಥಳದಲ್ಲಿ ಸಾಗಾಟಕ್ಕೆ ಉಪಯೋಗಿಸಿದ ಬಜಾಜ್ ಆಟೋ ರಿಕ್ಷಾ ಹಾಗೂ ಕೆಂಪು ಬಣ್ಣದ ಮಾರುತಿ ಕಾರನ್ನು ವಶಕ್ಕೆ ತೆಗೆದುಕೊಂಡು ಠಾಣಾ ಅಪರಾಧ ಕ್ರಮಾಂಕ ೭೫/೧೦ ಕಲಂ ೫, ೮(ಎ)(ಬಿ) ಐ.ಟಿ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಬಂಧಿತರನ್ನು ೧) ಈಶ್ವರ (೨೪ವರ್ಷ) ಬಿನ್ ಸುಧಾಕರ, ಆದರ್ಶ ನಗರ, ಮಂಚಿ ರಸ್ತೆ, ಮಣಿಪಾಲ, ೨) ಹರೀಶ್, (೨೯ ವರ್ಷ) ಬಿನ್ ಸಂಜೀವ, ತೋಕುಳಿ ಮನೆ, ಮೂಡುಬೆಳ್ಳೆ ಗ್ರಾಮ, ಮಣಿಪುರ ಅಂಚೆ, ಉಡುಪಿ ತಾಲೂಕು, ೩) ಸಂತೋಷ ಎಸ್ ಶೆಟ್ಟಿ (೨೧ ವರ್ಷ), ಬಿನ್ ಶ್ರೀನಿವಾಸ ಶೆಟ್ಟಿ, ಕುಂಟಾಳ ನಗರ, ಮೂಡುಬೆಳ್ಳೆ ಗ್ರಾಮ, ಮಣಿಪುರ ಅಂಚೆ, ಉಡುಪಿ ತಾಲೂಕು, ೪) ಪ್ರಶಾಂತ (೨೮ವರ್ಷ), ಬಿನ್ ತೋಮದಾಸ್, ದಾಸ್ ನಿಲಯ, ತೋಕುಳಿ ಮನೆ, ಮೂಡುಬೆಳ್ಳೆ ಗ್ರಾಮ, ಮಣಿಪುರ ಅಂಚೆ, ಉಡುಪಿ ತಾಲೂಕು, ೫) ಪ್ರಭಾಕರ (೩೦ ವರ್ಷ), ವಾಸು, ತೋಕುಳಿ ಮನೆ, ಮೂಡುಬೆಳ್ಳೆ ಗ್ರಾಮ, ಮಣಿಪುರ ಅಂಚೆ, ಉಡುಪಿ ತಾಲೂಕು, ೬) ರೇಖಾ ಮಂಡಲ್ (೨೨ ವರ್ಷ), ಬಿನ್ ಕಾಲು ಮಂಡಲ್, ಶಿಕೇರ್ ಬಗಾನ್, ಧಂ ಧಂ ಏರ್‌ಪೋರ್ಟ್ ಹತ್ತಿರ, ಉತ್ತರ ಛಬ್ಬಿಸ್ ಪರಗನಾ ಜಿಲ್ಲೆ, ಕೊಲ್ಕತ್ತಾ, ೭) ಶಾಂತಿ ಮುಲ್ಲಾ, (೨೩ವರ್ಷ), ಬಿನ್ ಅಸ್ಗರ್ ಮುಲ್ಲಾ, ಗಂಡ: ಆಕಾಶ್, ವಾಸ: ಬೋಶಿರ್ ಹಟ್, ಡಾಗ್ ಮೊಹಲ್ಲಾ, ಸ್ವರೂಪ್ ನಗರ, ಉತ್ತರ ಛಬ್ಬಿಸ್ ಪರಗನಾ ಜಿಲ್ಲೆ, ಕೊಲ್ಕತ್ತಾ ಮತ್ತು ೮) ದಯಾನಂದ ಟೈಲರ್ ಎಂದು ಗುರುತಿಸಲಾಗಿದೆ.

ವರದಿ: ಇಬ್ರಾಹಿಂ, ಗಂಗೊಳ್ಳಿ


Share: