ಭಟ್ಕಳ :ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಕಾರಗದ್ದೆ ಹುರುಳಿಯ ಗೊಂಡರ ಕೇರಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಅಪರಿಚಿತ ಶವದ ಗುರುತು ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಜಾಮಿಯಾಬಾದ್ ರೋಡ್ ಹೊನ್ನೆಗದ್ದೆ ನಿವಾಸಿ ಮೊಹ್ಮದ ಮೋಸಿನ್ ಶೇಕ್ (26) ಎಂದು ತಿಳಿದು ಬಂದಿದೆ. ಈತ ಕಳೆದ ಕೆಲ ತಿಂಗಳಿನಿಂದ ಮಾನಸಿಕವಾಗಿ ಅಸ್ವಸ್ಥತೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದ್ದು. ಮೃತ ದೇಹದಲ್ಲಿದ್ದ ಲುಂಗಿ ಮತ್ತು ಟಿ ಶರ್ಟ್ ಆಧಾರದ ಮೇಲೆ ಗುರುತು ಪತ್ತೆಯಾಗಿದೆ.
ನಿನ್ನೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹವನ್ನು ಕಾರಗದ್ದೆಯಲ್ಲಿನ ಸ್ಮಶಾನದಲ್ಲಿ ಪೊಲೀಸರ ಮುಂದಾಳತ್ವದ್ವಲ್ಲಿ ಹೂತು ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಇಂದು ಮೃತ ದೇಹದ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸುಮಂತ ಉಪಸ್ಥಿತಿಯಲ್ಲಿ ಹೂತಿದ್ದ ಮೃತ ದೇಹದ ಅವಶೇಷವನ್ನು ಹೊರತೆಗೆದು ಕುಟುಂಬವರಿಗೆ ಹಸ್ತಾಂತರ ಮಾಡಲಾಗಿದೆ
ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪಿಎಸೈ ಭರತಕುಮಾರ, ಸಿಬ್ಬಂದಿ ದೀಪಕ್ ನಾಯಕ,ಭಟ್ಕಳ ಸರ್ಕಾರಿ ಆಸ್ಪತ್ರೆಯ
ಮೂಳೆ ರೋಗ ತಜ್ಞ ಜನಾರ್ಧನ್ ಮೊಗೇರ,
ಸೂಸಗಡಿ ಕಂದಾಯ ನೀರಕ್ಷಕ ವಿಶ್ವನಾಥ್ ಗಾವ್ಕರ್,ಗ್ರಾಮ ಲೆಕ್ಕಾಧಿಕಾರಿ ಚಾಂದ್ ಭಾಷಾ,ಗ್ರಾಮಸಾಯಕ ವಾಸು ಶೆಟ್ಟಿ,
ಉಪಸ್ಥಿತರಿದ್ದರು.