ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ೧೦ನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಭಟ್ಕಳ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ೧೦ನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Mon, 13 Mar 2023 21:30:37  Office Staff   SOnews

ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ  ಇಸ್ಲಾಮಿಯಾ ಆಂಗ್ಲೋ-ಉರ್ದು ಪ್ರೌಢಶಾಲೆಯ ಉಸ್ಮಾನ್ ಹಸನ್ ಸಭಾಂಗಣದಲ್ಲಿ ಈ ವರ್ಷ ೧೦ ನೇ ತರಗತಿ ಅಚಿತಿಮ ಪರೀಕ್ಷೆಗೆ ಸಿದ್ದಗೊಂಡಿರುವ ವಿದ್ಯಾರ್ಥಿಗಳ ಗೌರವಾರ್ಥ ಬೀಳ್ಕೊಡುಗೆ ಸಭೆಯನ್ನು ಆಯೋಜಿಸಲಾಯಿತು, 

ಅರ್ಬಾಜ್ ಖಾನ್  ಪವಿತ್ರ ಕುರಾನ್ ಪಠಣದಿಂದ ಕಾರ್ಯಕ್ರಮ ಆರಂಭಗೊAಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಜಿಯಾ ಮಾತನಾಡಿ, ೧೦ನೇ ತರಗತಿ ಉತ್ತೀರ್ಣಗೊಂಡ ಬಳಿಕ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆದು ಸಲಹೆ ಸೂಚನೆಗಳನ್ನು ನೀಡಿದರು. ನಿಮಗೆ ಯಾವುದು ಇಷ್ಟವೋ ಅದೇ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ ಬೇರೆಯವರನ್ನು ನೋಡಿ ತೀರ್ಪು ನೀಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಭಟ್ಕಳ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಮೌಲಾನ ಸೈಯ್ಯದ್ ಸಾಲಿಕ್ ಬರ್ಮಾವರ್ ನದ್ವಿ. ಈ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ವಿದ್ಯಾವಂತರಿಗೇನು ಕೊರತೆಯಿಲ್ಲ. ಪ್ರತಿಭಾವಂತರಿಗೆ ಈಗಲೂ ಜಗತ್ತು ತಲೆಬಾಗುತ್ತದೆ. ಉನ್ನತ ಶಿಕ್ಷಣ ಪಡೆಯುವುದರ ಮೂಲಕ ಪ್ರಮಾಣಿಕವಾಗಿ ಬದುಕುವುದನ್ನು ಕಲಿತುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಅಂಜುಮನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಸ್ಸಾನ್ ಚಾಮುಂಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲ ವಿಷಯಗಳಲ್ಲಿ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಸಂಸ್ಥೆಯ ಕಾರ್ಯದರ್ಶಿ ಸಾದುಲ್ಲಾ ಬರ್ಮಾವರ್, ನೂರ್ ಆಹಮದ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೇದಾರ್ ಸ್ವಾಗತಿಸಿದರು. ಮೌಲಾನ ಶಾಹೀನ್ ಖಮರ್ ನದ್ವಿ ಧನ್ಯವಾದ ಅರ್ಪಿಸಿದರು. ಅಬ್ದುಲ್ ಹಫೀಝ್ ಖಾನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. 
  
 


Share: