ಭಟ್ಕಳ: ಎಲ್ಲ ಧಾನಗಳಿಗಿಂತ ರಕ್ತಧಾನ ಶ್ರೇಷ್ಟ ಧಾನವಾಗಿದೆ. ರಕ್ತಧಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕಾದ ಕೆಲಸ ಸಂಘ ಸಂಸ್ಥೆಗಳಿಂದಾಗಬೇಕು ಎಂದು ನಾಮಧಾರಿ ಗುರುಮಠದ ಅದ್ಯಕ್ಷ ಅರುಣ ನಾಯ್ಕ ಹೇಳಿದರು.
ಅವರು ನಗರದ ಆಸರಕೇರಿಯ ನಾಮಧಾರಿ ಸಬಾಭವನದಲ್ಲಿ ಎಚ್.ಡಿ.ಎಫ್.ಸಿ. ಬ್ಯಾಂಕ, ಕ್ರೀಯಾಶೀಲ ಗೆಳೆಯರ ಸಂಘ, ಸ್ಪಂದನ ಚಾರಿಟೇಬಲ್ ಟ್ರಸ್ಟ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ರಕ್ತಧಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ಎಚ್.ಡಿ.ಎಫ್.ಸಿ. ಬ್ಯಾಂಕ ನ ವ್ಯವಸ್ಥಾಪಕರಾದ ರಾಘವೇಂದ್ರ ನಾಯಕ ಮಾತನಾಡಿ ಎಲ್ಲ ಸಂಘ ಸಂಸ್ಥೆಗಳ ಸಹಕಾರದಿಂದ ರಕ್ತಧಾನ ಶಿಬಿರ ನಡೆಯುತ್ತಿದ್ದು ಇಂತಹ ಶಿಬಿರಕ್ಕೆ ನಮ್ಮ ಬ್ಯಾಂಕಿನ ಸಹಕಾರ ಯಾವತ್ತೂ ಇದೆ.
ಭಟ್ಕಳದ ಬಂದರ ರಸ್ತೆಯಲ್ಲಿ ಎಚ್.ಡಿ.ಎಫ್ಸಿ. ಬ್ಯಾಂಕನ ನೂತನ ಶಾಖೆ ಉದ್ಘಾಟನೆಯಾಗಲಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಕ್ರಿಯಾಶೀಲ ಗೆಳೆಯರ ಸಂಘದ ಆಧ್ಯಕ್ಷ ದೀಪಕ್ ನಾಯ್ಕ, ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಡಾ. ಅಭಿನಂದನ್ ಉಪಸ್ಥಿತರಿದರು. ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 50 ಕ್ಕೂ ಅಧಿಕ ಮಂದಿ ಈ ರಕ್ತಧಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತಧಾನ ಮಾಡಿದರು.
ಈ ಸಂದರ್ಭದಲ್ಲಿ ಕ್ರಿಯಾಶೀಲ ಗೆಳೆಯರ ಸಂಘದ ಭಾಸ್ಕರ ನಾಯ್ಕ, ಶ್ರೀಕಾಂತ ನಾಯ್ಕ, ಅರುಣ್ಕುಮಾರ, ವೆಂಕಟೇಶ ಮೊಗೇರ, ಪಾಂಡುರಂಗ ನಾಯ್ಕ, ರಮೇಶ ಖಾರ್ವಿ, ಮನೋಜ ನಾಯ್ಕ, ಮತ್ತಿತರರು ಸಹಕರಿಸಿದರು.