ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಆಜಾದ್ ನಗರದಲ್ಲಿ ಎಂಟು ವರ್ಷದ ಬಾಲಕನ ಅಪಹರಣ: ಬಾಲಕನನ್ನು ಎತ್ತಿಕೊಂಡು ಹೋಗುವ ದೃಶ್ಯ ವೈರಲ್

ಭಟ್ಕಳ ಆಜಾದ್ ನಗರದಲ್ಲಿ ಎಂಟು ವರ್ಷದ ಬಾಲಕನ ಅಪಹರಣ: ಬಾಲಕನನ್ನು ಎತ್ತಿಕೊಂಡು ಹೋಗುವ ದೃಶ್ಯ ವೈರಲ್

Sun, 21 Aug 2022 10:38:15  Office Staff   SO NEWS

ಭಟ್ಕಳ: ತಾಲ್ಲೂಕಿನ ಆಜಾದ್ ನಗರದಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಎಂಟು ವರ್ಷದ ಬಾಲಕನನ್ನು ಅಪಹರಿದ ಘಟನೆ ನಡೆದಿದೆ. ಅಮಾಯಕ ಬಾಲಕ ಅಲಿ ಸಾದಾ ತಂದೆ ಇಸ್ಲಾಂ ಸಾದಾ 8 ವರ್ಷ 
ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಅಕ್ಕಪಕ್ಕದ ಮನೆಗಳ ಅವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬರು ಇಳಿದು ಬಾಲಕನನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿದ್ದು, ಬಳಿಕ ವಾಹನ ಪರಾರಿಯಾಗಿದೆ.

ಆಜಾದ್ ನಗರ ಮೊದಲ ಕ್ರಾಸ್ ಜಾಲಿ ರಸ್ತೆ ಕಡೆಗೆ ಹೋಗುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದಾದ್ಯಂತ ಆತಂಕದ ಅಲೆ ಹಬ್ಬಿದೆ‌.

ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಲಾಗುತ್ತಿದೆ.

ಸಂಜೆ ಐದು ಗಂಟೆಯಿಂದ ಇದೇ ಪ್ರದೇಶದಲ್ಲಿ ವಾಹನ ಸುತ್ತುತ್ತಿರುವುದು ಕಂಡು ಬಂದಿದ್ದು ಅಪಹರಣದ ವೇಳೆ ವ್ಯಾನ್ ಹಿಂದೆ ದ್ವಿಚಕ್ರ ವಾಹನವೂ ಕಾಣಿಸಿಕೊಂಡಿದೆ.

ಪೊಲೀಸರು ಇತರ ಮನೆಗಳ ಹೊರಗಿನ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆದುಕೊಂಡಿದ್ದು, ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ, ಹುಡುಗನ ಮನೆಯ ಹೊರಗೆ ಬಹಳಷ್ಟು ಜನರು ಜಮಾಯಿಸಿದ್ದಾರೆ. ಜನರು ಹುಡುಗನ ಬಗ್ಗೆ ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದಾರೆ.
ತಡರಾತ್ರಿ ಸಾಹಿಲ್ ಆನ್‌ಲೈನ್‌ನೊಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಮಾತನಾಡಿ ನಾವು ನಮ್ಮ ಪ್ರಯತ್ನವನ್ನು ಮಾಡುತ್ತಿದ್ದೇವೆ, ಶೀಘ್ರದಲ್ಲೇ ನಾವು ಅಪಹರಣಕಾರರನ್ನು ಬಂಧಿಸುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ.


Share: