ಭಟ್ಕಳ:ತಾಲ್ಲೂಕಿನ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ರಾಜಕೀಯ ಪಕ್ಷದ ನಾಯಕರಿಗೆ ಅಂತಿಮ ಹಂತದ ಮತದಾರರ ಪಟ್ಟಿಯ ನಕಲು ಪ್ರತಿಯನ್ನು ಸಹಾಯಕ ಆಯುಕ್ತ ಮಮತಾದೇವಿ ಜಿ.ಎಸ್. ವಿತರಿಸಿದರು.
ನಂತರ ಮಾತನಾಡಿದ ಅವರು ಚುನಾವಣಾ ಆಯೋಗದ ನಿರ್ದೆಶನದಂತೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷದ ನಾಯಕರುಗಳಿಗೆ ವಿತರಿಸಲಾಗಿದೆ. ಹೆಸರು, ವಿಳಾಸ ಸೇರಿದಂತೆ ಇತರೆ ಅಂಶಗಳು ತಪ್ಪಿದ್ದಲ್ಲಿ ತಿದ್ದುಪಡಿಗೆ ಅವಕಾಶವಿದ್ದು, ಸೂಕ್ತ ದಾಖಲಾತಿಯೊಂದಿಗೆ ಸಾರ್ವಜನಿಕರು ತಿದ್ದುಪಡಿ ಮಾಡಿಕೊಳ್ಳಬಹುದು. ಮತದಾರ ಪಟ್ಟಿ ತಿದ್ದುಪಡಿಯ ವಿಷಯವಾಗಿ ಸಹಾಯವಾಣಿ ೧೦೫೬ ಸಂಖ್ಯೆಗೆ ಕರೆ ಮಾಡುವ ಮೂಲಕ ಇಲ್ಲವೇ ಸ್ವತ: ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ ಭಟ್, ಬಿ.ಜೆ.ಪಿ.ಯ ಶ್ರೀನಿವಾಸ ನಾಯ್ಕ, ಶ್ರೀನಿವಾಸ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಜೆ.ಡಿ.ಎಸ್. ಅಧ್ಯಕ್ಷ ರಾಜವರ್ಧನ ನಾಯಕ, ಕಮ್ಯುನಿಸ್ಟ್ ಪಕ್ಷದ ತಿಲಕ ಗೌಡ ಮುಂತಾದವರು ಉಪಸ್ಥಿತರಿದ್ದು ಮತದಾರರ ಪಟ್ಟಿಯನ್ನು ಪಡೆದುಕೊಂಡರು.