ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಸರ್ಕಾರಿ ಬಸ್ - ಸೈಕಲ್ ಢಿಕ್ಕಿ - ಸೈಕಲ್ ಸವಾರನ ಸಾವು

ಬಂಟ್ವಾಳ: ಸರ್ಕಾರಿ ಬಸ್ - ಸೈಕಲ್ ಢಿಕ್ಕಿ - ಸೈಕಲ್ ಸವಾರನ ಸಾವು

Sat, 06 Feb 2010 15:18:00  Office Staff   S.O. News Service

ಬಂಟ್ವಾಳ, ಫೆಬ್ರವರಿ ೬ : ಸರ್ಕಾರಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನೋರ್ವ ಮೃತಪಟ್ಟ ದಾರುಣ ಘಟನೆ ಫರಂಗಿ ಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಶನಿವಾರ ನಡೆದಿದೆ,

 

ಸ್ಥಳೀಯ ನಿವಾಸಿ ಮೊಹಮ್ಮದ್ ಹನೀಫ್ [28] ಮೃತ ದುರ್ದೈವಿ.ಮೃತ ಹನೀಫ್ ತಮ್ ಸೈಕಲ್ಲಿನಲ್ಲಿ ಮಸೀದಿ ಕಡೆಯಿಂದ ಫರಂಗಿ ಪೇಟೆ ಕಡೆಗೆ ತೆರಳುತ್ತಿದ್ದ ಸಂದರ್ಭ, ಧರ್ಮಸ್ಥಳ ಕಡೆಯಿಂದ ಬಂದ ಸರ್ಕಾರಿ ಬಸ್ಸು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಇಂದು ಬೆಳಿಗ್ಗೆ ಹತ್ತೂವರೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ತೀವ್ರತೆಗೆ ಗಂಭೀರ ಗಾಯಗೊಂಡ ಹನೀಫ್ ರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಭಂಧಿಸಿ ಬಸ್ಸು ಚಾಲಕ ಕೃಷ್ಣಪ್ಪ ಎಂಬವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Share: