ಮಂಜೇಶ್ವರ, ಜನವರಿ 27: ಮಂಜೇಶ್ವರ ಅನಂತೇಶ್ವರ ದೇವಳದ ಆಡಳಿತದ ಎಸ್.ಎ.ಟಿ ಶಾಲೆಗಾಗಿ ಹಳೆ ವಿದ್ಯಾರ್ಥಿಗಳ ನೆರವಿನಿಂದ ನೂತನವಾಗಿ ನಿರ್ಮಿಸಿದ ’ಅನಂತ ವಿದ್ಯಾ’ ಶಾಲಾಕಟ್ಟಡದ ಹಾಗೂ ದಿ! ಕೆ.ಶ್ರೀಧರ್ ಅಣ್ಣಪ್ಪ ನಾಯಕ್ ಸ್ಮಾರಕ ಸಭಾಂಗಣದ ಉದ್ಘಾಟನೆಯು ಫೆಬ್ರವರಿ ೨ ಮಂಗಳವಾರದಂದು ನಡೆಯಲಿದೆ. ೯.೨೫ ಶುಭ ಲಗ್ನದಲ್ಲಿ ಕಾಶೀಮಠ ಶ್ರೀ.ಶ್ರೀ.ಶ್ರೀ ಸುದೀಂಧ್ರ ತೀರ್ಥ ಸ್ವಾಮೀಜಯವರು ಕಟ್ಟಡವನ್ನು ಉದ್ಗಾಟಿಸಲಿರುವರು ನಂತರ ಸರಸ್ವತಿ ಪೂಜೆಯು ನಡೆಯಲಿದೆ.
ಡಾ.ಯು.ಎಸ್ ಮೋಹನ್‌ದಾಸ್ ನಾಯಕ್ ಅಧ್ಯಕ್ಷತೆಯಲ್ಲಿ ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಯು.ಎ ಖಾದರ್, ಉಪಾಧ್ಯಕ್ಷ ಎಂ.ಜೆ ಕಿಣಿ, ಕಾಸರಗೋಡು ಡಿ.ಡಿ.ಇ ವಿ.ರಾಮಚಂದ್ರನ್, ಡಿ.ಇ.ಒ ಮೋಹನ್‌ದಾಸ್ , ಎ.ಇ.ಒ ಸತ್ಯನಾರಾಯಣ, ಬಿ.ಪಿ.ಒ ಇಬ್ರಾಹಿಂ ಶುಭಾಸಂಸನೆಗೈಯ್ಯುವರು ಲಿಲ್ಲಿ ಬಾಯ್ ಟೀಚರ್ ಸ್ವಾಗತಿಸಲಿದ್ದು ಶಾಲಾ ಮುಖ್ಯೋಪಾಧ್ಯಾಯ ಉದಯಶಂಕರ್ ಭಟ್ ವಂದಿಸಲಿರುವರು. ನಂತರ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆಯೆಂದು ಶಾಲಾ ಅಭಿವೃದ್ದಿ ಮಂಡಳಿ ಸದಸ್ಯೆ ಶ್ರೀಮತಿ ಲಿಲ್ಲಿ ಬಾಯ್ ಟೀಚರ್ ಮಂಜೇಶ್ವರದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ಗೋಷ್ಟಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಉದಯಶಂಕರ್ ಭಟ್ ಹಾಗೂ ಪೂರ್ಣಯ್ಯ ಪುರಾಣಿಕ್ ಉಪಸ್ಥಿತರಿದ್ದರು.
ಚಿತ್ರ, ವರದಿ: ಆರಿಫ್ ಮಚ್ಚಂಪಾಡಿ, ಮಂಜೇಶ್ವರ