ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ರಿಯಾದ್: ಭಾರತದ ಪ್ರಮುಖ ಆದಾಯ ತಾಣ ಸೌದಿ ಅರೇಬಿಯಾ

ರಿಯಾದ್: ಭಾರತದ ಪ್ರಮುಖ ಆದಾಯ ತಾಣ ಸೌದಿ ಅರೇಬಿಯಾ

Mon, 01 Mar 2010 03:01:00  Office Staff   S.O. News Service
ಪ್ರಸ್ತುತ ಸೌದಿ ಅರೇಬಿಯಾದಲ್ಲಿ 25 ಲಕ್ಷ ಭಾರತೀಯರು ವಾಸಿಸುತ್ತಿದ್ದು, ಇದು ಭಾರತದ ಪ್ರಮುಖ ಆದಾಯ ತರುವ ತಾಣವಾಗಿ ಮಾರ್ಪಟ್ಟಿದೆ.   

ರಿಯಾದ್  :ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಹಿಡಿದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಭಾರತದ ನುರಿತ ನೌಕರರು ತೊಡಗಿಸಿಕೊಂಡಿದ್ದು, ಬಹುತೇಕರು ‘ನೀಲಿ ಕಾಲರ್’ ಹೊಂದಿದ್ದಾರೆ ಎಂದು ಸೌದಿ ಪತ್ರಿಕೆಯೊಂದು ವರದಿ ಮಾಡಿದೆ.

‘2000ರಿಂದ 2008ರ ಅವಧಿಯಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ರಫ್ತು ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ.ಇದೇ ವೇಳೆ, ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ. ಒಟ್ಟಾರೆ ಸೌದಿ ಅರೇಬಿಯಾದ  ಮೇಲಿನ ಭಾರತದ ಅವಲಂಬನೆ ಹೆಚ್ಚಾಗುತ್ತಿದ್ದು,  ಮುಂದಿನ ವರ್ಷಗಳಲ್ಲಿ ಇದು ಇನ್ನೂ ಏರಿಕೆಯಾಗಲಿದೆ.

ಹೆಚ್ಚಿದ ವಿದೇಶಿ ವಿನಿಮಯ: ವಿದೇಶಿ ವಿನಿಮಯ ಕೂಡಾ ಹೆಚ್ಚಾಗುತ್ತಿದ್ದು, ಭಾರತದ ಶಕ್ತಿ ವಲಯದ ಅಭಿವೃದ್ಧಿಗೆ ಸೌದಿ ನೆರವು ಅತ್ಯಗತ್ಯವಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಿದೆ. 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರದಿಂದ ಸೌದಿ ಅರೇಬಿಯಾ ಪ್ರವಾಸ ಆರಂಭಿಸಿದ್ದು, ಈ ವೇಳೆ ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆ ಇದೆ. ಒಟ್ಟು ಹತ್ತು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. 
 
ದ್ವಿ-ಪಕ್ಷೀಯ ಸಂಬಂಧ ಸುಧಾರಣೆ ಎರಡೂ ದೇಶಗಳಿಗೂ ಅಗತ್ಯವಿದೆ. ವಿದೇಶಿ ವಿನಿಮಯದಲ್ಲಿ ಸೌದಿ ಅರೇಬಿಯಾ ಪಾಲು ಹೆಚ್ಚಾಗಿಯೇ ಇದೆ. 2008ರಲ್ಲಿ 67.3 ಶತಕೋಟಿಗೆ ತಲುಪಿತ್ತು. 2000ನೇ ಸಾಲಿಗೆ ಹೋಲಿಸಿದರೆ, ಇದು ಏಳು ಪಟ್ಟು ಹೆಚ್ಚಾದಂತಾಗಿದೆ.

ಮಾಧ್ಯಮಗಳ ಮುಖಪುಟದಲ್ಲಿ ಸಿಂಗ್:

28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಸೌದಿ ಅರೇಬಿಯಾಗೆ ಭೇಟಿ ನೀಡುತ್ತಿರುವುದನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಇಲ್ಲಿನ ಮಾಧ್ಯಮಗಳು, ಈ ಸುದ್ದಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಭಾನುವಾರ ಸಂಚಿಕೆಯ ಮುಖಪುಟದಲ್ಲಿ ವರದಿ ಪ್ರಕಟಿಸಿವೆ.

ಶಿಷ್ಟಾಚಾರಕ್ಕೆ ಒಳಪಟ್ಟು ಸೌದಿ ದೊರೆ ಅಬ್ದುಲ್ಲಾ ಅವರನ್ನು   ಹೊರತು ಪಡಿಸಿ, ದೊರೆಯ ಸಹೋದರ ಉಪ ಪ್ರಧಾನಿ      ಕ್ರೌನ್ ಪ್ರಿನ್ಸ್ ಸುಲ್ತಾನ್ ಸೇರಿ ದಂತೆ ಇಡೀ ಸಂಪುಟ ಸದಸ್ಯರು ಪ್ರಧಾನಿ ಸಿಂಗ್ ಅವರನ್ನು ಮೂರು ದಿನಗಳ ಪ್ರವಾಸಕ್ಕೆ ಬರ ಮಾಡಿಕೊಂಡಿದ್ದಾರೆ.


Share: