ಮಂಜೇಶ್ವರ ಜನವರಿ 6: ಮುಸ್ಲಿಂ ಲೀಗ್ ನೇತಾರ ನೋರ್ವನನ್ನು ತಂಡವೊಂದು ಆಕ್ರಮಿಸಿ ಇರಿದು ಕೊಲೆಗೈದ ಘಟನೆ ಕಳೆದ ರಾತ್ರಿ ಕುಂಬಳೆ ಠಾಣಾ ವ್ಯಾಪ್ತಿಯ ಕೊಯಿಪ್ಪಾಡಿ ಎಂಬಲ್ಲಿ ನಡೆದಿದೆ. ಮುಸ್ಲಿಂ ಲೀಗ್ ಕೊಯಿಪ್ಪಾಡಿ ವಾರ್ಡು ಕಾರ್ಯದರ್ಶಿ ಫಿಶರೀಸ್ ಕಾಲನಿ ನಿವಾಸಿ ಹಮೀದ್ ಕೊಲೆಯಾದ ವ್ಯಕ್ತಿ.
ಘಟನೆಯ ವಿವರ: ಕಳೆದ ರಾತ್ರಿ ಸ್ನೆಹಿತರೊಂದಿಗೆ ಕುಂಬಳೆ ಪೇಟೆಯಿಂದ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ಪೊದೆಯೆಡೆಯಲ್ಲಿ ಅವಿತಿದ್ದ ಮೂವರ ತಂಡವೊಂದು ಯದ್ವಾ ತದ್ವಾ ಇರಿದು ಪರಾರಿಯಾಗಿದೆ. ಇರಿತದಿಂದ ಗಂಭೀರ ಗಾಯಗೊಂಡ ಹಮೀದ್ ಸ್ತಳದಲ್ಲೇ ಕುಸಿದು ಬಿದ್ದಿದ್ದು ಸುದ್ದಿ ತಿಳಿದು ಸ್ತಳಕ್ಕಾಗಮಿಸಿದ ಪೋಲೀಸರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ಕೊಲೆ ಪ್ರಕರಣದಲ್ಲಿ ನಿಯಾಸ್ ಸೇರಿದಂತೆ ಮೂವರ ತಂಡವೊಂದು ಶಾಮೀಲಾಗಿರೂವೂದಾಗಿ ಪೋಲೀಸರಿಗೆ ಮಾಹಿತಿ ದೊರೆತಿದೆ. ಮೃತ ಹಮೀದ್ ಈ ಹಿಂದೆ ಸಿ.ಪಿ.ಎಂ ಕಾರ್ಯಕರ್ತರಾಗಿದ್ದ ಹಮೀದ್ ಇತ್ತೀಚೆಗೆ ಮುಸ್ಲಿಂ ಲೀಗಿಗೆ ಸೇರಿದ್ದರು. ಆವಾಗಲೇ ಅವರನ್ನು ವಾರ್ಡ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಕೊಲೆಗೆ ಪೂರ್ವ ದ್ವೇಶವೇ ಕಾರಣವೆನ್ನಲಾಗುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು. ಆರೋಪಿಗಳಿಗಾಗಿ ಕುಂಬಳೆ ವೃತ್ತ ನಿರೀಕ್ಷಕ ದಾಮೋದರನ್ ನೇತೃತ್ವದ ಪೋಲೀಸರು ಶೋಧ ನಡೆಸುತ್ತಿದ್ದಾರೆ. ಮತದೇಹವನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ.

ಹರತಾಳ ಪೂರ್ಣ: ಮುಸ್ಲಿಂ ಲೀಗ್ ಪೆರ್ವಾಡ್ ಕಾರ್ಯದರ್ಶಿ ಹಮೀದ್ ಹತ್ಯೆಯನ್ನು ಖಂಡಿಸಿ ಕುಂಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಮುಸ್ಲಿಂ ಲೀಗ್ ಕರೆನೀಡಿದ ಹರತಾಳ ಪೂರ್ಣಗೊಂಡಿದೆ. ಕುಂಬಳೆ ವ್ಯಾಪ್ತಿಯಲ್ಲಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಮುಚ್ಚಿಕೊಂಡಿದ್ದವು. ವಾಹಣ ಸಂಚಾರ ಕೂಡಾ ಸ್ತಗಿತಗೊಂಡಿದ್ದವು.
ಬಿ.ಜೆ.ಪಿ ಆರೋಪ: ಮುಸ್ಲಿಂ ಲೀಗ್ ಪೆರ್ವಾಡ್ ಕಾರ್ಯದರ್ಶಿ ಹಮೀದ್ ಹತ್ಯೆಯನ್ನು ಸಿ.ಪಿ.ಎಮ ಕೋಮು ಬಣ್ನ ಬಳಿಯಲು ಪ್ರಯತ್ನಿಸುತ್ತಿದೆಯೆಂದು ಬಿ.ಜೆ.ಪಿ ಆರೋಪಿಸಿದೆ.