ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಶಿರಾಲಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಾರ್ಯಗಾರ

ಭಟ್ಕಳ: ಶಿರಾಲಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಾರ್ಯಗಾರ

Sat, 12 Aug 2023 18:11:01  Office Staff   S O News

ಭಟ್ಕಳ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಂದು ದಿನದ ಕಾರ್ಯಗಾರ ಶಿರಾಲಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ನಂತರ ಮಾತನಾಡಿದ ಅವರು ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯ ಶಿಸ್ತಿನ ಸಿಪಾಯಿಗಳಿದ್ದಂತೆ ಹಾಗೂ ಶಾಲೆಯ ಸರ್ವತೋಮುಖ ಬೆಳವಣಿಗೆಯ ಶಿಲ್ಪಿಗಳು ಎಂದರು. 

ಮಾರ್ಗದರ್ಶಕರಾಗಿ ಉಪಸ್ಥಿತರಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕ ದತ್ತಾತ್ರೇಯ ಎಚ್. ನಾಯ್ಕ ಆಟಗಳ ನಿಯಮ, ನಿರ್ಣಾಯಕರ ಜವಾಬ್ದಾರಿ ಹಾಗೂ ವಲಯ, ತಾಲೂಕಾ ಕ್ರೀಡೆ ಸಂಘಟನೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. 

ವೇದಿಕೆಯಲ್ಲಿ ಪ್ರಕಾಶ ಶಿರಾಲಿ, ಎಮ್.ಟಿ. ಗೌಡ, ಗಿರೀಶ ನಾಯಕ, ಶ್ರೀಧರ ಹೆಗಡೆ, ನಾಗರಾಜ ಪಟಗಾರ, ಡಿ.ಆಯ್. ಮೊಗೇರ, ಬಿ.ಕೆ. ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರು ಉಪಸ್ಥರಿದ್ದರು.

ಶಿಕ್ಷಕ ಎಂ.ಟಿ. ಗೌಡ ಸ್ವಾಗತಿಸಿದರು. ವಿನಾಯಕ ಭಟ್ಟ ನಿರೂಪಿಸಿದರು. ಶ್ರೀಧರ ಹಗಡೆ ವಂದಿಸಿದರು.  


Share: