ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ವಿಶ್ವ ಕುರಾನ್‌ ಪಠಣ ಸ್ಪರ್ಧೆಯಲ್ಲಿ ವಿಜೇತ ಇಬ್ರಾಹಿಂಗೆ ತಂಜೀಮ್ ಮತ್ತು ಫೆಡರೇಷನ್ ಮುಖಂಡರಿಂದ ಸ್ವಾಗತ

ಭಟ್ಕಳ: ವಿಶ್ವ ಕುರಾನ್‌ ಪಠಣ ಸ್ಪರ್ಧೆಯಲ್ಲಿ ವಿಜೇತ ಇಬ್ರಾಹಿಂಗೆ ತಂಜೀಮ್ ಮತ್ತು ಫೆಡರೇಷನ್ ಮುಖಂಡರಿಂದ ಸ್ವಾಗತ

Wed, 27 Sep 2023 00:53:47  Office Staff   S O News

ಭಟ್ಕಳ: ಇತ್ತೀಚಿಗೆ ಸೌದಿಅರೇಬಿಯಾದಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಇಲ್ಲಿನ ಕಾರಗದ್ದೆ ನಿವಾಸಿ ಇಬ್ರಾಹಿಂ ಶಾಬಂದ್ರಿಗೆ ಭಟ್ಕಳ ಮಜ್ಜಿಸೇ ಇಸ್ಲಾ ವ ತಂಜೀಮ್‌ ಮತ್ತು ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ವತಿಯಿಂದ ನೂರ್ ಮಸೀದಿ ಆವರಣದಲ್ಲಿ ಸ್ವಾಗತ ಕೋರಲಾಯಿತು. 

ಈ ಸಂದರ್ಭದಲ್ಲಿ ಕಾಝಿ ಮೌಲಾನಾ ಖಾಜಾ ಅಕ್ರೆಮಿ ಮದನಿ , ತಂಜೀಮ್‌ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರಕೀಬ್ ಎಮ್.ಜೆ., ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಝೀಜುರೆಹಮಾನ್ ನದ್ವಿ , ನಿವೃತ್ತ ಪ್ರಾಚಾರ್ಯ ಎ.ಎಮ್.ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.


Share: