ಉಡುಪಿ : ಡಿ.೨೦ ಫರೋವ ಚಕ್ರವರ್ತಿ ತನ್ನ ಅಧಿಕಾರ ಬಲದಿಂದ ದೇಶವನ್ನು ಬಡ-ಶ್ರೀಮಂತ ರೆಂಬುದಾಗಿ ಇಬ್ಭಾಗ ಮಾಡಿ, ಬಡವರನ್ನು ಗುಲಾಮರನ್ನಾಗಿ ಮಾಡಿದಾಗ ಸೃಷ್ಟಿಕರ್ತನು ಆತನ ನ್ನು ಶಿಕ್ಷಿಸಿ ಆತನ ಶವವನ್ನು ಮುಂದಿನ ಜನಾಂಗಕ್ಕೆ ನಿದರ್ಶನವನ್ನಾಗಿ ಮಾಡಿದ್ದನ್ನು ಕಾಣಬಹು ದು.
ಕೇವಲ ದೇವ ಭಯ, ದೇವಾಜ್ಞೆಯ ಅನುಸರಣೆ ಮಾತ್ರ ನಮ್ಮನ್ನು ಈ ಗುಲಾಮಗಿರಿಯಿಂದ ಮುಕ್ತಿಗೊಳಿಸಬಹುದು ಎಂದು ಬಂಡವಾಳಶಾಹಿ ಸಾಮ್ರಾಜ್ಯತ್ವ ವಿರೋಧಿ ರಾಷ್ಟ್ರೀಯ ಅಭಿಯಾ ನದ ಅಂಗವಾಗಿ ಜಾಮಿಯಾ ಮಸೀದಿ ಉಡುಪಿಯಲ್ಲಿ ಆಯೋಜಿಸಿದ ಮಹಿಳೆಯರ ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕಿ ಶಮೀರ ಜಹಾನ್ ಮಾತನಾಡಿ ದರು.
ಇನ್ನೋರ್ವ ಅತಿಥಿ ರಕ್ಷಿಂದಾ ಬಟ್ಕಳ್‌ರವರು ಮಾತನಾಡುತ್ತಾ ಇಂದು ಸಮಾಜದಲ್ಲಿ ಶೈತಾನನ ಅನುಸರಣೆ ಮಾಡುವವರು ಮಾತ್ರ ಗೌರವಾನ್ವಿತರಾಗುತ್ತಿದ್ದಾರೆ. ಇಸ್ಲಾಮ್ ಶಾಂತಿಯ ಧರ್ಮ, ಪ್ರವಾದಿಯವರು ಇಸ್ಲಾಮನ್ನು ಜಗತ್ತಿನ ಮೂಲೆ ಮೂಲೆಗೆ ಶಾಂತಿಯ ಮಾರ್ಗವಾಗಿ ಪಸರಿಸಿ ದರು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ಜನರನ್ನು ಶಾಂತಿಯೆಡೆಗೆ ದೇವಭಯದೊಂದಿಗೆ ಜೋಡಿಸು ವುದಾಗಿದೆ. ಅಂತಹ ಕಾರ್ಯ ನಮ್ಮಿಂದ ಸಾಧ್ಯವಾಗಲಿ ಎಂದು ಹಾರೈಸಿದರು.
ವಾಜಿದಾ ತಬಸ್ಸುಮ್ ರ ಕುರ್‌ಆನ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುಲ್ ಸೂಮ್ ಅಬೂಬಕ್ಕರ್ ಪ್ರಾಸ್ತಾವಿಕ ಹಾಗೂ ಸ್ವಾಗತ sಂ?ಂಣವನ್ನು ಮಾಡಿದರು. ಸಾಬಿರಾ ಸಿರಾಜ್ ಧನ್ಯವಾದವನ್ನಿತ್ತರು.
ವರದಿ: ಮೊಹಮ್ಮದ್ ಮರ್ಕಡ