ಭಟ್ಕಳ: ಕಳೆದ ಅಗಸ್ಟ್ ತಿಂಗಳ ೨ನೇ ತಾರೀಖಿನಂದು ಸುರಿದ ಭಾರೀ ಮಳೆಯಿಂದಾಗಿ ಅಪಾರ ಹಾನಿಯಾಗಿದ್ದ ಭಟ್ಕಳ ತಾಲೂಕಿನ ವಿವಿಧ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗುರುವಾರ ಸಂಜೆ ಉಡುಪಿಯಿಂದ ಆಗಮಿಸಿದ್ದ ತಂಡ ಮೊದಲು ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತದಿಂದ ನಾಲ್ವರು ಸಾವೀಗೀಡಾಗಿದ್ದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿತು.
ನಂತರ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಕೊಚ್ಚಿ ಹೋಗಿರುವ ಸೇತುವೆ, ಗೌಸಿಯಾ ಸ್ಟಿçÃಟ್‌ನಲ್ಲಿ ಕೊಚ್ಚಿ ಹೋಗಿರುವ ನೂತನ ಟ್ರಾನ್ಸ್ಫಾರ್ಮರ್, ಯುಜಿಡಿ ಪೈಪ್, ಸಂಪರ್ಕ ಕಿರು ರಸ್ತೆ, ನಗರದಲ್ಲಿ ನೀರು ನುಗ್ಗಿ ಹಾನಿಯಾಗಿರುವ ಅಂಗಡಿಗಳು, ಸಾರದಹೊಳೆಯಲ್ಲಿ ಆಗಿರುವ ಹಾನಿ, ಬೇಂಗ್ರೆ ಪ್ರದೇಶದ ಹಾನಿ, ಕೃಷಿ ಭೂಮಿ, ತೋಟಗಾರಿಕಾ ಭೂಮಿ ಹಾನಿ, ಸಮುದ್ರ ಕೊರೆತ, ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗುಡ್ಡ ಕುಸಿತ, ಭೂ ಕುಸಿತ ಉಂಟಾಗಿ ನಿರ್ಮಾಣವಾಗಿರುವ ಬಾವಿ ಇತ್ಯಾದಿಗಳನ್ನು ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದಲ್ಲಿದ್ದ ರಾಜ್ಯದ ಎನ್.ಡಿ.ಆರ್.ಎಫ್. ಮುಖ್ಯಸ್ಥ ಮನೋಜ್ ರಂಜನ್ ಅವರು ಕಳೆದ ಅಗಸ್ಟ್ ತಿಂಗಳಿನಲ್ಲಿ ಉಂಟಾದ ನೆರೆ ಹಾವಳಿಯಿಂದ ಅಂದಾಜು ೭೬೦೦ ಕೋಟಿ ಹಾನಿಯಾಗಿದೆ. ರಾಜ್ಯದಿಂದ ೧೦೧೨ ಕೋಟಿ ರೂಪಾಯಿಗಳ ಪರಿಹಾರ ನೀಡಲಾಗಿದ್ದು ಹೆಚ್ಚುವರಿಯಾಗಿ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ. ರಾಜ್ಯ ಸರಕಾರದ ಪ್ರಸ್ತಾವನೆಯ ಮೇರೆಗೆ ಕೇಂದ್ರದ ತಂಡ ಏಳು ಮಂಡಿಯನ್ನು ನೆರೆಹಾನಿ ಸಮೀಕ್ಷೆ ಮಾಡಲು ಕಳುಹಿಸಿದ್ದು ಈಗಾಗಲೇ ಬೆಂಗಳೂರು, ಮಂಡ್ಯ, ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಮಳೆಯಿಂದ ಆಗಿರುವ ಹಾನಿಯ ಅಂದಾಜು ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೂಡಾ ಸಮೀಕ್ಷೆ ಕೈಗೊಂಡಿದ್ದು ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಇಂಟರ್ ಮಿನಿಸ್ಟಿರಿಯಲ್ ಸೆಂಟ್ರಲ್ ತಂಡದಲ್ಲಿ ಜಂಟಿ ಕಾರ್ಯದರ್ಶಿ ಮಹೇಶ ಕುಮಾರ್, ಹಣಕಾಸು ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಭವ್ಯಾ ಪಾಂಡೆ ಹಾಗೂ ಉ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್, ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ