ಭಟ್ಕಳ, ಜನವರಿ 27: ಕಳೆದ ಹತ್ತು ವರ್ಷಗಳ ಕಾಲ ದಿನಗೂಲಿಯಾಗಿ ಕೆಲಸ ಮಾಡಿದ ನಮ್ಮ ವಿರುದ್ಧ ಭಟ್ಕಳ ಪುರಸಭೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಆಪಾದಿಸಿರುವ ಹತ್ತಕ್ಕೂ ಹೆಚ್ಚು ದಿನಗೂಲಿ ನೌಕರರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸಿದರು.
ಕಳೆದ ನಾಲ್ಕು ದಿನಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ಭಟ್ಕಳ ಪುರಸಭೆಯ ಎದುರು ನಡೆಸಿದ ಅವರು ಬುಧವಾರ ತಮ್ಮ ಧರಣಿ ಸ್ಥಳವನ್ನು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂದೆ ವರ್ಗಾಯಿಸಿಕೊಂಡರು. ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಧರಣಿಯನ್ನು ಕೈ ಬಿಡುವುದಾಗಿ ದಲಿತ ಮುಖಂಡರು ತಿಳಿಸಿದ್ದಾರೆ. ಧರಣಿಯ ನೇತೃತ್ವವನ್ನು ಭಟ್ಕಳ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾಜಕುಮಾರ್ ವಹಿಸಿದ್ದರು.