ಭಟ್ಕಳ: ಬಿಜೆಪಿ ಪಕ್ಷದ ರಾಜ್ಯ ನಾಯಕರ ಕಾರ್ಯಕಾರಣಿ ಸಭೆ ಮುರುಡೇಶ್ವರದಲ್ಲಿ ಹಮ್ಮಿಕೊಂಡ ನೇಮಿತ ಭಟ್ಕಳ ಸಂಶುದ್ದೀನ್ ಸರ್ಕಲ್ ಹತ್ತಿರ ಬಿಜೆಪಿ ಪಕ್ಷದವರು ಪುರಸಭೆಯಿಂದ ಯಾವುದೇ ಅನುಮತಿಯನ್ನು ಪಡೆಯದೆ ತಮ್ಮ ಪಕ್ಷದ ಬಾವುಟ ಹಾಗೂ ಪ್ಲೆಕ್ಸ್ ಗಳನ್ನು ಹಾಕಿರುವುದನ್ನು ಖಂಡಿಸಿ ಪುರಸಭೆಯ ಅಧಿಕಾರಿಗಳ ವಿರುದ್ಧ ಎಸ್.ಡಿ.ಪಿ.ಐ(SDPI) ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ SDPI ಪಕ್ಷ ಜಿಲ್ಲಾ ಅಧ್ಯಕ್ಷ ಕರಾವಳಿ ವಿಭಾಗ ತೌಫಿಕ್ ಇಸ್ಮಾಯಿಲ್ ಬ್ಯಾರಿ ಮಾತನಾಡಿ
ಭಟ್ಕಳ ಸಂಶುದ್ದೀನ್ ಸರ್ಕಲ್ ಬಳಿ ಅಗಸ್ಟ್ 15 ರಂದು ರಾಷ್ಟ್ರೀಯ ಧ್ವಜ ಹಾಗೂ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ರಂದು ಕರ್ನಾಟಕ ಬಾವುಟ ಹಾಕಲು ಮಾತ್ರ ಅವಕಾಶ ಇರುತ್ತದೆ.ಆದರೆ ಬಿಜೆಪಿ ಪಕ್ಷದವರು ಅನಧೀಕೃತವಾಗಿ ತಮ್ಮ ಪಕ್ಷದ ಬಾವುಟ ಹಾಕಿರುವುದನ್ನು ಖಂಡಿಸಿ ಅದನ್ನು ಕೂಡಲೇ ತೆಗೆಯಬೇಕು.
ಪುರಸಭೆಗೆ ಸಂಬಂಧಿಸಿದ ಸಂಶುದ್ದೀನ್ ಸರ್ಕಲ್ ವೃತ್ತದ ಬಳಿ ಕನ್ನಡದಲ್ಲಿ ನಾಮಫಲಕ ಅಂಟಿಸಿದ್ದು ಯಾವುದೇ ಫ್ಲಾಕ್ಸ್ ಮತ್ತು ಬಂಟಿಂಗ್ಸ್ ಗಳನ್ನು ಈ ಜಾಗದಲ್ಲಿ ಅಳವಡಿಸಬಾರದು ಎಂಬ ಬಗ್ಗೆ ಸೂಚನಾ ಫಲಕ ಇದ್ದು ಅದನ್ನು ಉಲ್ಲಂಘಿಸಿ ಇವರು ಬಾವುಟ ಸಿಗುವುದು ಕಾನೂನು ಉಲ್ಲಂಘನೆ ಆಗಿರುತ್ತದೆ ಆದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಬೇಕು.
ಭಟ್ಕಳದ ನಗರ ವ್ಯಾಪ್ತಿಯಲ್ಲಿ ಏನೇ ನಡೆದರೂ ಕಾನೂನು ಕ್ರಮ ಕೈಗೊಳ್ಳುವುದು ಭಟ್ಕಳ ಪುರಸಭೆಯ ಮುಖ್ಯ ಕಾರ್ಯದರ್ಶಿಯ ಕೆಲಸವಾಗಿರುತ್ತದೆ ಆದ್ದರಿಂದ ಸಂಶುದ್ದೀನ್ ಸರ್ಕಲ್ ಬಳಿ ಹಾಕಿರುವ ಬಾವುಟವನ್ನು ಸಂಜೆ 05-00 ಗಂಟೆಯ ಒಳಗೆ ತೆಗೆಯ ಬೇಕು ಇಲ್ಲದಿದ್ದ ಪಕ್ಷದಲ್ಲಿ ನಾವು ಸಂಶುದ್ದೀನ್ ಸರ್ಕಲ್ ಬಳಿ ತೆರಳಿ ಪ್ರತಿಭಟನೆಗೆ ಕೈಗೊಳ್ಳುತ್ತೇವೆ ಮುಂದೆ ಏನಾದರೂ ಆದಲ್ಲಿ ಇದಕ್ಕೆ ಪುರಸಭೆ ಮುಖ್ಯ ಅಧಿಕಾರಿಗಳೇ ನೇರ ಹೊಣೆ ಆಗಿರುತ್ತಾರೆ ಎಂದು ಎಚ್ಚರಿಕೆ ನೀಡಿರುತ್ತಾರೆ.