ಉಡುಪಿ, ಅ.೧೯: ಕೊಂಕಣ ರೈಲ್ವೆ ಮಾರ್ಗದಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕುರ್ಲಾ, ಪುಣೆ, ಗುಜರಾತ್, ರಾಜಸ್ತಾನ ಹಾಗೂ ದಿಲ್ಲಿಯಿಂದ ಬರುವ ಮತ್ತು ಹೋಗುವ ರೈಲುಗಳ ವೇಳಾ ಪಟ್ಟಿ ನವೆಂಬರ್ ಒಂದರಿಂದ ಬದಲಾಗಲಿವೆ.
ಮಳೆಗಾಲದಿಂದಾಗಿ ನಿಧಾನಗತಿಯಲ್ಲಿ ಚಲಿಸುವ ವೇಳಾಪಟ್ಟಿ ಜೂನ್ ೧೫ರಿಂದ ಅ.೩೧ರವರೆಗೆ ಚಲಾವಣೆಯಲ್ಲಿರುತ್ತದೆ. ಅ.೩೧ರ ಮಧ್ಯರಾತ್ರಿಯ ನಂತರ ಎಲ್ಲ ರೈಲುಗಳು ಮಾಮೂಲಿ ವೇಗದಗತಿಯಲ್ಲಿ ಚಲಿಸಲಿವೆ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅ.೩೧ರ ಮಧ್ಯರಾತ್ರಿಗಿಂತ ಮೊದಲು ಎರಡೂ ಕಡೆಗಳಿಂದ ಹೊರಡುವ ರೈಲುಗಳು ನಿಧಾನಗತಿ ವೇಗದಲ್ಲಿ ಚಲಿಸಲಿವೆ. ಆದುದರಿಂದ ಅ.೩೧ ಮತ್ತು ನ.೧ರಂದು ಪ್ರಯಾಣಿಸಲು ಟಿಕೆಟ್ ಕಾದಿರಿಸಿದ ಪ್ರಯಾಣಿಕರು ಟಿಕೆಟುಗಳಲ್ಲಿ ನಮೂದಿಸಿದ ಸಮಯವನ್ನು ಗಮನಿಸಬಹುದು ಎಂದು ಅವರು ತಿಳಿಸಿದ್ದಾರೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಚಲಿಸುವ ರೈಲುಗಳ ಹೊಸ ವೇಳಾ ಪಟ್ಟಿಯನ್ನು
-ಭಾರತೀಯ ರೈಲು ವೇಳಾ ತಖ್ತೆ ೨೦೦೯-೧೦ರಲ್ಲಿ ಗಮನಿಸಬೇಕೆಂದು ಅವರು ಕೋರಿದ್ದಾರೆ. ಇವುಗಳನ್ನು ಬುಕ್ಕಿಂಗ್ ಕೌಂಟರ್ಗಳಲ್ಲಿ ಐದು ರೂ.ನೀಡಿ ಖರೀದಿಸಬಹುದು. ಅಥವಾ ರೈಲ್ವೆ ನಿಲ್ದಾಣದ ಮಾಹಿತಿ ಕೌಂಟರ್ಗಳಲ್ಲಿ ಕೇಳಿತಿಳಿದುಕೊಳ್ಳುವಂತೆ ಅವರು ತಿಳಿಸಿದ್ದಾರೆ.