ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಕರ್ಣಾಟಕ ಬ್ಯಾಂಕ್‌ನ ಭಟ್ಕಳ ಶಾಖೆಯಲ್ಲಿ ಸಂಸ್ಥಾಪನಾ ಶತಮಾನೋತ್ಸವ ವರ್ಷಾಚರಣೆ

ಭಟ್ಕಳ: ಕರ್ಣಾಟಕ ಬ್ಯಾಂಕ್‌ನ ಭಟ್ಕಳ ಶಾಖೆಯಲ್ಲಿ ಸಂಸ್ಥಾಪನಾ ಶತಮಾನೋತ್ಸವ ವರ್ಷಾಚರಣೆ

Sun, 19 Feb 2023 06:01:47  Office Staff   S O News

ಭಟ್ಕಳ: ಕರ್ಣಾಟಕ ಬ್ಯಾಂಕ್‌ನ ಭಟ್ಕಳ ಶಾಖೆಯಲ್ಲಿ ಸಂಸ್ಥಾಪನಾ ಶತಮಾನೋತ್ಸವ ವರ್ಷಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬ್ಯಾಂಕಿನ ಗ್ರಾಹಕರು, ಕೆನರಾ ಬ್ಯಾಂಕ್ ನಿವೃತ್ತ ಎ.ಜಿ.ಎಂ., ಶ್ರೀ ಲಕ್ಷ್ಮಿ ಸರಸ್ವತಿ ಪತ್ತಿನ ಮತ್ಸö್ಯ ಸೌಹಾರ್ಧ ಸಂಘದ ಅದ್ಯಕ್ಷರೂ ಆದ ಅಣ್ಣಪ್ಪ ಮೊಗೇರ ಅವರು ಮಾತನಾಡಿ ಅಂದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿಕೊಂಡ ಐದು ಬ್ಯಾಂಕುಗಳಲ್ಲಿ ಕರ್ಣಾಟಕ ಬ್ಯಾಂಕ್ ಕೂಡಾ ಒಂದಾಗಿದೆ.  ಬ್ಯಾಂಕಿನಲ್ಲಿ ದೊರೆಯುವ ಉತ್ತಮ ಸೇವೆಯಿಂದಾಗಿ ಇಂದು ದೇಶದ ಮೂಲೆ ಮೂಲೆಗಳಲ್ಲಿ ಇದು ನಮ್ಮ ಬ್ಯಾಂಕ್ ಎನ್ನುವ ಭಾವನೆ ಗ್ರಾಹಕರಲ್ಲಿ ಬಂದಿದೆ. ಬ್ಯಾಂಕಿನ ಸೇವೆಯು ಉತ್ತಮವಾಗಿದ್ದಲ್ಲಿ ಗ್ರಾಹಕರು ಬರುತ್ತಾರೆ ಎನ್ನುವುದಕ್ಕೆ ಈ ಬ್ಯಾಂಕ್ ಒಂದು ಉತ್ತಮ ಉದಾಹರಣೆ ಎಂದರು. 
ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಟಿ.ಎಸ್. ಶಿರೂರ್, ಭಟ್ಕಳ ಶಾಖೆಯ ಪ್ರಥಮ ಗ್ರಾಹಕ ಗಣಪತಿ ಎಂ. ಭಟ್ಟ, ಇನ್ನೋರ್ವ ಗ್ರಾಹಕ ಜಾಲಿ ಜಿ.ವಿ.ಎಸ್.ಎಸ್. ಅಧ್ಯಕ್ಷ ಮಂಜಪ್ಪ ನಾಯ್ಕ ಜಾಲಿ, ಕಟ್ಟಡದ ಮಾಲಕಿ ವಿದ್ಯಾ ಭಟ್ಟ ಮಾತನಾಡಿದರು. 

ಬ್ಯಾಂಕಿನ ವ್ಯವಸ್ಥಾಪಕ ಸುನಿಲ್ ಪೈ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದ ಕುರಿತು ವಿವರಿಸಿದರು. 

ಈ ಸಂದರ್ಭದಲ್ಲಿ ಬ್ಯಾಂಕಿನ ವಲಯ ಕಚೇರಿಯ ಅಧಿಕಾರಿ ರವಿಶಂಕರ ಅವಭೃತ, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.


Share: