ಕಾರ್ಕಳ: ಬೇರೆಯವರೂ ದನ ಸಾಗಾಟ ಮಾಡುವಾಗ ಅದನ್ನು ಹಿಡಿದು ಹಿಂದುತ್ವದ ಪೋಸು ಕೊಡುವ ಬಜರಂಗಿಗಳೂ ದನ ಕಳ್ಳತನ ಮಾಡುತ್ತಿರುವುದನ್ನು ನಿನ್ನೆ ರಾತ್ರಿ ಹೆಬ್ರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚಾರದ ಸತೀಶ್ ಗಾಣಿಗ ಎಂಬಾತ ನಿನ್ನೆ ನಾಲ್ಕು ಜಾನುವಾರುಗಳನ್ನು ಹಿಡಿದು ಸಾಗಿಸುತ್ತಿದ್ದಾಗ ಹೆಬ್ರಿ ಪೊಲೀಸರ ಕೈಗೆ ಸಿಕ್ಕಿಬಿದ್ದ. ವಿಚಾರಿಸಿದಾಗ ಆತ ಕೊಂಡೊಯ್ಯುತ್ತಿದ್ದ ಜಾನುವಾರುಗಳು ಕದ್ದದ್ದು ಎಂದು ತಿಳಿದು ಬಂತು. ಅಂತಿಮವಾಗಿ ವಿಚಾರಣೆ ನಡೆಸಿ ಸಂಬಂಧಪಟ್ಟವರಿಗೆ ದನಗಳನ್ನು ಹಸ್ತಾಂತರಿಸಲಾಯಿತು.
ಮಂಗಳೂರಿನಲ್ಲೂ...
ದನಗಳನ್ನು ಕಳ್ಳತನ ಮಾಡುವುದು ಬಜರಂಗಿಗಳು ಇದೇ ಮೊದಲಲ್ಲವಾದರೂ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬೀಳುವುದು ಇದೇ ಮೊದಲು ಎನ್ನಲಾಗಿದೆ. ಮಂಗಳೂರಿನ ಉರ್ವಾ, ಕೊಟ್ಟಾರ ಪರಸರದಲ್ಲಿ ದನಕಳ್ಳರ ಜಾಲವೇ ಇದೆ ಎಂಬ ದೂರು ಇದೆ. ಕುತೂಹಲ ಎಂದರೆ ಇವರು ಹಿಂದೂಗಳ ಮನೆಯಿಂದಲೇ ದನ ಕದ್ದು ಸಾಗಿಸುತ್ತಾರೆ. ಇತ್ತೀಚೆಗೆ ಉರ್ವಾ ಪರಿಸರದ ಬಜರಂಗದಳದ ಪುಡಿ ನಾಯಕ ನೊಬ್ಬ ಬಿಜೈಯ ಬಡ ಹಿಂದೂ ಯುವಕನೊಬ್ಬ ಸಾಕಿದ ಎರಡು ಜಾನುವಾರು ಕದ್ದು ಅದನ್ನು ವಾಪಾಸು ಕೊಡಲು ಸಾಕಷ್ಟು ಹಣ ಪೀಕಿದ್ದ ಎನ್ನುವ ಅಂವೂ ಬೆಳಕಿಗೆ ಬಂದಿದೆ. ಹಿಂದುತ್ವದ ಹೆಸರಿನಲ್ಲಿ ಕೆಲ ನಕಲಿ ಬಜರಂಗಿಗಳು ಇದನ್ನೇ ಫುಲ್‌ಟೈಮ್ ದಂಧೆಯನ್ನಾಗಿಸಿ ಕೊಂಡಿದ್ದಾರೆ ಎನ್ನುವುದು ಇಲ್ಲಿನ ನಾಗರಿಕರ ಆರೋಪವಾಗಿದೆ.
ಸೌಜನ್ಯ: ಜಯಕಿರಣ