ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬ೦ಟ್ವಾಳ: ಅಸಹಾಯಕ ಕುಟುಂಬಕ್ಕೆ ನೆರವು ಬೇಕಿದೆ

ಬ೦ಟ್ವಾಳ: ಅಸಹಾಯಕ ಕುಟುಂಬಕ್ಕೆ ನೆರವು ಬೇಕಿದೆ

Tue, 10 Nov 2009 11:39:00  Office Staff   S.O. News Service
ಬಂಟ್ವಾಳ, ನ.೯ :ಇದು ಸಜೀಪಮೂಡ ಗ್ರಾಮದ ಬೊಳ್ಳಾಯಿಯಲ್ಲಿರುವ ಅಬ್ದುಲ್ ಹಮೀದ್ ಎಂಬುವರ ಕುಟುಂಬದ ಶೋಚನೀಯ ಚಿತ್ರಣ.

ಮನೆ ಯಜಮಾನ ನಾಲ್ಕೂವರೆ ವರ್ಷದಿಂದ ಮಲಗಿದ ಸ್ಥಿತಿಯಲ್ಲಿದ್ದಾನೆ. ಬೀಡಿ ಕೆಲಸ ದಿಂದ ಬರುವ ಅಲ್ಪ ಆದಾಯದಲ್ಲಿ ಮನೆಯ ಖರ್ಚನ್ನೂ ಮಕ್ಕಳ ಪಾಲನೆ ನಿಭಾಯಿಸು ತ್ತಾ, ಗಂಡನ ಸೇವೆಯಲ್ಲಿಯೇ ದಿನದೂಡುತ್ತಿದ್ದಾಳೆ ಆತನ ಪತ್ನಿ. ಮುಗ್ಧ ಮಕ್ಕಳು ಹೆತ್ತ ವರ ದುಃಖಕ್ಕೆ ಸಾಥ್ ನೀಡುತ್ತಿವೆ.

ಏನಾಯಿತು?: ೨೦೦೫ರ ಮೇ ೧೨. ಅಬ್ದುಲ್ ಹಮೀದ್ ಎಂದಿನಂತೆ ತನ್ನ ವೃತ್ತಿ ಬಾವಿ ಗೆ ರಿಂಗ್ ಅಳವಡಿಸುವ ಕಾರ್ಯ ನಿಮಿತ್ತ ವಿಟ್ಲದ ಪೆರುವಾಯಿ ಗ್ರಾ.ಪಂ. ಕಚೇರಿಗೆ ಹೋ ಗಿದ್ದರು. ೧೫ ದಿನಗಳಿಂದ ಅಲ್ಲಿನ ಬಾವಿಗೆ ರಿಂಗ್ ಅಳವಡಿಸುವ ಕೆಲಸ ನೆರವೇರಿಸಿದ್ದ ಹಮೀದ್ ಅಂದು ತನ್ನ ಕೆಲಸದಲ್ಲಿ ಮಗ್ನರಾಗಿದ್ದರು. ಕೆಲಸ ಮಾಡುತ್ತಿದ್ದಂತೆ ನಿಂತಿದ್ದ ಮರದ ಹಲಗೆ ಮುರಿದು ೨೪ ಅಡಿ ಆಳದ ಬಾವಿಯೊಳಗೆ ಬಿದ್ದರು.
11-bnt2.jpg


ನೀರು ಕಡಮೆ ಇದ್ದುದರಿಂದ ಬಿದ್ದ ರಭಸಕ್ಕೆ ಅವರ ಬೆನ್ನು ಮೂಳೆಯೇ ತುಂಡಾಯಿತು. ಕೂಡಲೇ ಅವರನ್ನು ಬಾವಿಯಿಂದ ಮೇಲೆತ್ತಿ, ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾ ಯಿತು. ತಿಂಗಳ ಕಾಲ ಆಸ್ಪತ್ರೆಯಲ್ಲೇ ಕಳೆದ ಹಮೀದ್‌ಗೆ ಸ್ಪಲ್ಪ ದಿನದ ವಿರಾಮದ ಬಳಿಕ ಬೆನ್ನುಮೂಳೆ ಸರಿಯಾಗಿ ಜೋಡಣೆಗೊಂಡು, ಗುಣಮುಖರಾಗುವ ಭರವಸೆ ದೊರಕಿತು.

ಘಟನೆ ನಡೆದು ಇದೀಗ ನಾಲ್ಕುವರೆ ವರ್ಷ ಸಮೀಪಿಸುತ್ತಿದೆ. ಆದರೆ ವೈದ್ಯರ ಮಾತಿ ನಂತೆ ಹಮೀದ್ ಗುಣಮುಖರಾಗಿಲ್ಲ. ಸೊಂಟದ ಕೆಳಗೆ ಸಂಪೂರ್ಣ ಶಕ್ತಿಯನ್ನೇ ಕಳೆದು ಕೊಂಡಿರುವ ಇವರು ಹಾಸಿಗೆ ಬಿಟ್ಟು ಏಳದ ಸ್ಥಿತಿ ನಿರ್ಮಾಣವಾಗಿದೆ. ಇಂದು ಗುಣವಾಗ ಬಹುದು, ನಾಳೆ ಗುಣವಾಗಬಹುದು, ತಾನು ಹಿಂದಿನಂತೆ ಎದ್ದು ಓಡಾಡಬಹುದು ಎಂದು ಕಾಯುತ್ತಿದ್ದ ಹಮೀದ್ ಮುಖದಲ್ಲಿ ಈಗ ನಿರಾಸೆಯ ಛಾಯೆ ಮೂಡಿದೆ.

ಪತ್ನಿಯೇ ಎಲ್ಲಾ..: ಮಲಗಿದ್ದಲ್ಲೇ ಇರುವ ಅಬ್ದುಲ್ ಹಮೀದ್‌ಗೆ ಈಗ ಪತ್ನಿ ಜಮೀಲಾಳೇ ಆಧಾರ. ೬ ಹಾಗೂ ೫ರ ಹರೆಯದ ಪುಟ್ಟ ಮಕ್ಕಳ ಪಾಲನೆಯೊಂದಿಗೆ, ಸಂಸಾರದ ಸಂ ಪೂರ್ಣ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಇದಕ್ಕಾಗಿ ತನ್ನ ಬೀಡಿ ಕಟ್ಟುವ ಕೆಲಸದಿಂದ ಬರುವ ಆದಾಯವನ್ನೇ ನಂಬಿಕೊಂಡಿದ್ದಾರೆ. ಹಮೀದ್ ಸ್ಥಿತಿಯನ್ನು ಕಂಡು ಸಂಬಂಧಿ ಗಳೂ ದೂರ ಸರಿದಿದ್ದು, ಸಂಸಾರ ನಿಭಾಯಿಸಲು ಜಮೀಲಾ ಹೆಣಗಾಡುತ್ತಿದ್ದಾರೆ.
11-bnt3.jpg


ಹದಗೆಟ್ಟ ಆರ್ಥಿಕ ಸ್ಥಿತಿ: ಬೀಡಿ ಕಟ್ಟುವ ಕೆಲಸದಿಂದ ರಾತ್ರಿ ಹಗಲು ದುಡಿದರೂ ಜಮೀಲಾಗೆ ತಿಂಗಳಿಗೆ ಹೆಚ್ಚೆಂದರೆ ೮೫೦ ರು. ಮಾತ್ರ ಸಂಪಾದಿಸಲು ಸಾಧ್ಯವಾಗುತ್ತದೆ. ಅಂಗವಿಕಲ ವೇತನವೆಂದು ೪೦೦ ರು. ಹಮೀದ್‌ಗೆ ಸಿಗುತ್ತದೆ. ಆದರೆ ಹಮೀದ್ ಔಷಧ ಖರ್ಚು ತಿಂಗಳಿಗೆ ೩ ಸಾವಿರ ಬೇಕಾಗುತ್ತದೆ. ಜೊತೆಗೆ ಮನೆಯ ಖರ್ಚು, ಮಕ್ಕಳ ಪಾಲ ನೆಯ ಖರ್ಚು ಸೇರಿ ಸಂಸಾರ ನಿಭಾಯಿಸುವುದೇ ದುಸ್ತರವಾಗಿದೆ. ಈ ನಡುವೆ ಔಷಧಿಗೆ ಮಾಡಿದ ಸಾಲ ೩೦ ಸಾವಿರದ ಗಡಿ ದಾಟಿದೆ.

ಬಾಡಿಗೆ ಮನೆ: ಅಬ್ದುಲ್ ಹಮೀದ್ ಮೂಲತಃ ವಿಟ್ಲದ ಕುಕ್ಕಿಲ ನಿವಾಸಿ. ಆದರೆ ಚಿಕಿತ್ಸೆ ಯ ಅನುಕೂಲಕ್ಕಾಗಿ ಸಜೀಪಮೂಡ ಗ್ರಾಮದ ಬೊಳ್ಳಾಯಿಯ ಪೊಟ್ಟುಗುಡ್ಡೆ ಎಂಬಲ್ಲಿ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಮನೆ ಬಾಡಿಗೆ ದರ ೩೦೦ ರು. ಮೊದಲೇ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಾಡಿಗೆ ಹೊರೆ ಯೂ ಇದೆ. ಆದರೂ ಎಲ್ಲ ಕಷ್ಟದ ಹೊರೆಯ ಭಾರವನ್ನು ದೇವರ ಮೇಲೆ ಹಾಕಿರುವ ಕುಟುಂಬ ದಾನಿಗಳ ನೆರವಿನ ಹಸ್ತ ಎದುರು ನೋಡುತ್ತಿದೆ.
 

ದಾನಿಗಳು ಈ ಕೆಳಕಂಡ ಬ್ಯಾಂಕ್ ಖಾತೆಯ ಮೂಲಕ ಹಮೀದ್ ರವರಿಗೆ ಸಹಾಯ ನೀಡಬಹುದಾಗಿದೆ:

SB Account No. 335, Agricultural Service Cooperative Bank, Kodangayi Branch, Vittal Padnoor, Kodapadavu Post - 574222, Dakshina Kannada, Karnataka, India.

ಹೆಚ್ಚಿನ ವಿವರಗಳಿಗೆ ದೂರವಾಣಿ:  0091-9880747124 

Share: