ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ : ಮಾಜಿ ಶಾಸಕರಿಂದ ಪ್ರಣಾಳಿಕೆ ಗ್ಯಾರಂಟಿ ಕಾರ್ಡ್‌ಗಳ ವಿತರಣೆ

ಭಟ್ಕಳ : ಮಾಜಿ ಶಾಸಕರಿಂದ ಪ್ರಣಾಳಿಕೆ ಗ್ಯಾರಂಟಿ ಕಾರ್ಡ್‌ಗಳ ವಿತರಣೆ

Tue, 14 Mar 2023 06:18:26  Office Staff   so news

ಭಟ್ಕಳ:ಮಾರ್ಚ14 ರಂದು  ಕಾಂಗ್ರೆಸ್ ಪಕ್ಷದ ಬಹು ನಿರೀಕ್ಷೆಯ ಪ್ರಣಾಳಿಕೆಯಾದ  ಗೃಹಲಕ್ಷೀ, ಗೃಹಜ್ಯೋತಿ ಮತ್ತು ಅನ್ನಭಾಗ್ಯದ ಗ್ಯಾರಂಟಿ ಕಾರ್ಡುಗಳನ್ನ ರಾಜ್ಯದ ಪ್ರತಿ ಮನೆಮನೆಗೆ ತಲುಪಿಸಬೇಕೆನ್ನುವ  ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ  ಭಟ್ಕಳ ಕಾಂಗ್ರೆಸ್ಸಿನ ಕಛೇರಿಯಲ್ಲಿ  ಮಾಜಿ ಶಾಸಕರಾದ ಸನ್ಮಾನ್ಯ ಮಂಕಾಳ್ ವೈದ್ಯರವರ ನೇತೃತ್ವದಲ್ಲಿ ಗ್ಯಾರಂಟಿ ಕಾರ್ಡುಗಳನ್ನ ವಿತರಿಸುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಕಾಳ್ ವೈದ್ಯರವರು ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಣಾಳಿಕೆಯನ್ನ ಭಟ್ಕಳ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಮನೆಗೆ ವ್ಯವಸ್ಥಿತವಾಗಿ ತಲುಪಿಸುವ ಕೆಲಸವನ್ನ ಆಯಾ ಭಾಗದ ಮುಖಂಡರು ಕಾರ್ಯಕರ್ತರ ಸಹಕಾರ ಪಡೆದು ಕಟ್ಟುನಿಟ್ಟಾಗಿ ಮಾಡಬೇಕೆನ್ನುವ ಸೂಚನೆಯನ್ನ ನೀಡಿದರು. ಈಗಾಗಲೇ ಕ್ಷೇತ್ರದ ಸುಮಾರು 150 ಅಧಿಕ ಬೂತ ಮಟ್ಟದಲ್ಲಿ ಕಾಂಗ್ರೆಸ್ಸಿನ ಜನಜಾಗೃತಿ ಸಭೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಮತದಾರರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎನ್ನುವ ಸಂತಸವನ್ನ ವ್ಯಕ್ತಪಡಿಸಿದರು. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷದ ಪರವಾಗಿ ನಿಷ್ಠೆಯಿಂದ ದುಡಿದವರಿಗೆ ಮುಂದಿನ ಜಿಲ್ಲಾ ಪಂಚಾಯಿತ ಮತ್ತು ತಾಲುಕಾ ಪಂಚಾಯಿತ್ ಚುನಾವಣೆಯಲ್ಲಿ  ಟಿಕೆಟ್ ನೀಡಲಾಗುತ್ತದೆ ವಿನ: ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲವೆನ್ನುವ ಸಂದೇಶವನ್ನ ರವಾನಿಸಿದರು. ಪಕ್ಷದಲ್ಲಿ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳುವುದನ್ನ ಬಿಟ್ಟು ಪಕ್ಷದ ಘನತೆಗೆ ಚ್ಯುತಿಬರುವಂತೆ ಸಾರ್ವಜನಿಕವಾಗಿ ಚರ್ಚಿಸಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೇನ್ನುವ ಎಚ್ಚರಿಕೆಯನ್ನ ನೀಡಿದರು. ಈ ಸಂದರ್ಭ  ವೇದಿಕೆಯ ಮೇಲೆ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ವೆಂಕಟೇಶ ನಾಯ್ಕ, ಕಾಂಗ್ರೆಸ್ಸಿನ ಭಟ್ಕಳ ವಿಧಾನಸಭಾ ಕ್ಷೇತ್ರದ ಸಂಯೋಜಕರಾದ ಭಾಸ್ಕರ ಪಟಗಾರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಅಬ್ದುಲ್ ಮಜೀದ, ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ಸಂಯೋಜಕರಾದ ಭೂದೇವ್ ಶರ್ಮರವರು ಕಾಂಗ್ರೆಸ್ ಪಕ್ಷದ ಸಂಘಟನೆಯ ಕುರಿತಾಗಿ ಮಾತನಾಡಿದರು. ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷರಾದ ನಯನಾ ನಾಯ್ಕ, ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಜಯಶ್ರೀ ಮೊಗೇರವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ನಾಯ್ಕ ಕಾರ್ಯಕ್ರಮವನ್ನ ನಿರ್ವಹಿಸಿದರೆ ಖಜಾಂಚಿ ದೇವಿದಾಸ ಆಚಾರಿಯವರು ಅತಿಥಿಗಳನ್ನ ಸ್ವಾಗತಿಸಿದರು.


Share: