ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ : ಜುಲೈ 2 ರ ಮಧ್ಯೆರಾತ್ರಿವರೆಗೆ 144 ನಿಷೇದಾಜ್ಞೆ ಜಾರಿ. ತಹಶೀಲ್ದಾರ ಡಾ ಸುಮಂತ್ ಆದೇಶ.

ಭಟ್ಕಳ : ಜುಲೈ 2 ರ ಮಧ್ಯೆರಾತ್ರಿವರೆಗೆ 144 ನಿಷೇದಾಜ್ಞೆ ಜಾರಿ. ತಹಶೀಲ್ದಾರ ಡಾ ಸುಮಂತ್ ಆದೇಶ.

Sat, 02 Jul 2022 14:26:32  Office Staff   SO News

ಭಟ್ಕಳ : ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಇರುವ ಪುರಸಭೆ ಕಟ್ಟಡಕ್ಕೆ  ಅಳವಡಿಸಿದ್ದ ಉರ್ದು ಬೋರ್ಡ್ ತೆರವುಗೊಳಿಸಿದ ಹಿನ್ನಲೆಯಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆಯದಂತೆ  ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ವಿಧಿಸಲಾಗಿದೆ.

ಭಟ್ಕಳ ತಾಲೂಕು ದಂಡಾಧಿಕಾರಿ ಡಾ. ಸುಮಂತ್.ಬಿ.ಇ ಆದೇಶ ಹೊರಡಿಸಿದ್ದು ಪುರಸಭೆಯ 500 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕ‌ರ್ ಅವರ ಸೂಚನೆ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ ಐದಕ್ಕಿಂತ ಹೆಚ್ಚು ಜನರು ಸೇರದಂತೆ ಸೂಚನೆ ನೀಡಲಾಗಿದೆ. 

 ಜುಲೈ 1 ರ ಮಧ್ಯಾಹ್ನ ಮೂರು ಗಂಟೆಯಿಂದ ಜುಲೈ 2ರ ಮಧ್ಯರಾತ್ರಿ 12ರ ವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪುರಸಭೆ ಬೋರ್ಡ್ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಕೊನೆಗೆ ಪುರಸಭೆ ಸದಸ್ಯರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ಡಾ ಸುಮನ್ ಫೆನ್ನೆಕರ್ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಉರ್ದು ಬೋರ್ಡ್ ತೆರವುಗೊಳಿಸಿದ್ದರು.


Share: