ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ : ಆಗಸ್ಟ್ 18ರಂದು ಮುಗಳಿಕೋಣೆಯಲ್ಲಿ ಮುದ್ದು ರಾಧೆ, ಮುದ್ದು ಕೃಷ್ಣ ಸ್ಪರ್ದೆ.

ಭಟ್ಕಳ : ಆಗಸ್ಟ್ 18ರಂದು ಮುಗಳಿಕೋಣೆಯಲ್ಲಿ ಮುದ್ದು ರಾಧೆ, ಮುದ್ದು ಕೃಷ್ಣ ಸ್ಪರ್ದೆ.

Sat, 13 Aug 2022 04:49:26  Office Staff   SO News

ಭಟ್ಕಳ : ತಾಲೂಕು ಗಾಣಿಗ ಸೇವಾ ಸಂಘ, ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ನಿಯಮಿತ ಭಟ್ಕಳ, ಹಾಗೂ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್  18 ರಂದು ಕೃಷರಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಲಿದೆ.

ಆರು ವರ್ಷದೊಳಗಿನ ಮಕ್ಕಳಿಗಾಗಿ *"ಮುದ್ದು ರಾಧೆ, ಮುದ್ದು ಕೃಷ್ಣ"* ಸ್ಪರ್ಧೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮುಗಳಿ ಕೋಣೆ  ಭಟ್ಕಳದ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಭಟ್ಕಳ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ‌  ಸುಭಾಷ್  ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ಹಾಗೂ ಆಕರ್ಷಕ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನಾ ಪತ್ರ ಹಾಗೂ  ನೆನಪಿನ   ಕಾಣಿಕೆ ನೀಡಲಾಗುವುದು. ಭಟ್ಕಳ ತಾಲೂಕಿನ ಎಲ್ಲಾ ಸಮಾಜದ ಬಂಧುಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳು ಸ್ಪರ್ಧೆಯಲ್ಲಿ  ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು  ಅವರು ವಿನಂತಿಸಿದರು.  

ಕಾರ್ಯಕ್ರಮದ ಸಂಯೋಜಕ ಪ್ರಕಾಶ ಶಿರಾಲಿ ಮಾತನಾಡಿ,  ಶ್ರೀ ಕೃಷ್ಣ ಜನ್ಮೋತ್ಸವದ ಪ್ರಯುಕ್ತ  ದಿ ನ್ಯೂ ಇಂಗ್ಲೀಷ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ರೂಪಕ, ಭಗವದ್ಗೀತೆ ಪಠಣ, , ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಾಗೂ ಸ್ಪರ್ಧೆಯಲ್ಲಿ  ಭಾಗವಹಿಸುವ ಸ್ಪರ್ಧಾಳುಗಳಿಗೆ ಸ್ಥಳದಲ್ಲಿಯೇ ಫೋಟೋ      ಬೇಕಾದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ  ನಾರಾಯಣ ಶೆಟ್ಟಿ ಉಪಾಧ್ಯಕ್ಷರ ಗಜಾನನ ಶೆಟ್ಟಿ , ರಾಧಾ ಶೆಟ್ಟಿ,   ರಾಜೇಶ್ ಶೆಟ್ಟಿ , ಮನೋಜ್ ಶೆಟ್ಟಿ , ಕಿರಣ ಶೆಟ್ಟಿ, ಹಾಗೂ ಗಾಣಿಗ ಸಮಾಜದ ಸದಸ್ಯ ಬಾಂಧವರು ಹಾಜರಿದ್ದರು.


Share: