ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ : ಎಸ್ಎಸ್ಎಲ್ಸಿಯಲ್ಲಿ ಶೇ. 90.07 ಫಲಿತಾಂಶ. ರಕ್ಷಿತಾ ಜಿಲ್ಲೆಗೆ ಫಸ್ಟ್.7 ಶಾಲೆಗಳು 100 ಶೇ. ದಾಖಲೆ.

ಭಟ್ಕಳ : ಎಸ್ಎಸ್ಎಲ್ಸಿಯಲ್ಲಿ ಶೇ. 90.07 ಫಲಿತಾಂಶ. ರಕ್ಷಿತಾ ಜಿಲ್ಲೆಗೆ ಫಸ್ಟ್.7 ಶಾಲೆಗಳು 100 ಶೇ. ದಾಖಲೆ.

Tue, 09 May 2023 03:23:48  Office Staff   ಭಟ್ಕಳ : ಎಸ್ಎಸ್ಎಲ್ಸಿಯಲ್ಲಿ ಶೇ. 90.07 ಫಲಿತಾಂಶ. 7 ಶಾಲ

ಭಟ್ಕಳ: 2022-23ನೇ ಶೈಕ್ಷಣಿಕ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಭಟ್ಕಳ ತಾಲೂಕು ಶೇ.90.07ರಷ್ಟು ತೇರ್ಗಡೆಯಾಗಿದೆ.

ಭಟ್ಕಳದಲ್ಲಿ 2035 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದು, 1833 ಮಂದಿ ಉತ್ತೀರ್ಣರಾಗಿದ್ದಾರೆ.
ಭಟ್ಕಳದ ಸರಕಾರಿ ಶಾಲೆಗಳು ಶೇ.94.36ರಷ್ಟು ಉತ್ತೀರ್ಣರಾಗಿದ್ದರೆ, ಅನುದಾನಿತ ಶಾಲೆಗಳು ಶೇ.77.26 ಮತ್ತು ಅನುದಾನರಹಿತ ಶಾಲೆಗಳು ಶೇ.94.52ರಷ್ಟು ಫಲಿತಾಂಶ ಪಡೆದಿವೆ.

ಭಟ್ಕಳದ ನಾಲ್ಕು ಸರ್ಕಾರಿ ಶಾಲೆಗಳು ಶೇ. ನೂರರಷ್ಟು ಫಲಿತಾಂಶ ದಾಖಲಿಸಿವೆ.  ಸರ್ಕಾರಿ ಪ್ರೌಢಶಾಲೆ ತೆಂಗಿನಗುಡಿ, ಸರ್ಕಾರಿ ಪ್ರೌಢಶಾಲೆ ಜಾಲಿ, ಕರ್ನಾಟಕ ಸಾರ್ವಜನಿಕ ಶಾಲೆ, ಬೈಲೂರು ಮತ್ತು ಮೋರಾರ್ಜಿ ದೇಸಾಯಿ ವಸತಿ ಶಾಲೆ ಮುರ್ಡೇಶ್ವರ, ಆರ್.ಎನ್. ಶೆಟ್ಟಿ ವಿದ್ಯಾನಿಕೇತನ ಪ್ರೌಢಶಾಲೆ ಮುರ್ಡೇಶ್ವರ, ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆ, ಭಟ್ಕಳ ಮತ್ತು ಮುರ್ಡೇಶ್ವರದ ಬೀನಾ ವೈದ್ಯ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ಶೇ. ನೂರರಷ್ಟು ಸಾಧನೆ ಮಾಡಿದೆ.

ರಕ್ಷಿತಾ ಜಿಲ್ಲೆಗೆ ಫಸ್ಟ್ : ಕಿತ್ತೂರು ರಾಣಿ ಚಿನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ರಾಮ ನಾಯ್ಕ ಹೆಬ್ಳೆ 625ಕ್ಕೆ 622 ಅಂಕ ಪಡೆದು ಶೇ.99.52 ಅಂಕ ಗಳಿಸಿದ್ದಾಳೆ. ಈಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ನಾಲ್ಕನೇ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ.

ಭಟ್ಕಳ ತಾಲೂಕಿನ ಮೂವರು ಟಾಪರ್‌ಗಳು: ಹೆಬ್ಳೆ ಕಿತ್ತೂರು ರಾಣಿ ಚಿನ್ನಮ್ಮ ವಸತಿ ಶಾಲೆಯ ರಕ್ಷಿತಾ ರಾಮ ನಾಯ್ಕ (99.52%), ಭಟ್ಕಳದ ಆನಂದ ಆಶ್ರಮ ಪ್ರೌಢಶಾಲೆಯ ವಿಜೇತ್ ಜಿ ಗೌಡ (99.36%) ಮತ್ತು ಕಿತ್ತೂರು ರಾಣಿ ಚಿನ್ನಮ್ಮ ವಸತಿ ಶಾಲೆಯ ರಕ್ಷಿತಾ ರಾಮ ಗೊಂಡ ಹೆಬ್ಳೆ (99.36%), ರೋಹಿತ್ ರಾಜೇಶ್ ಶೆಟ್ಟಿ ಭಟ್ಕಳದ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯ (98.72%) ಮತ್ತು ಕಿತ್ತೂರು ರಾಣಿ ಚಿನ್ನಮ್ಮ ವಸತಿ ಶಾಲೆಯ ಸಾನಿಕಾ ಬಾಬು ನಾಯ್ಕ, ಹೆಬ್ಳೆ (98.72%) ಪಡೆದಿದ್ದಾರೆ.

ಮೂವರು ಕನ್ನಡ ಮಾಧ್ಯಮ ಟಾಪರ್‌ಗಳು: ಕುಂಟವಾಣಿಯ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ ಬಡಿಯ ಗೊಂಡ (97.12%), ಸರ್ಕಾರಿ ಪ್ರೌಢಶಾಲೆಯ ಸುಚಿತ್ರಾ ಪರಮೇಶ್ವರ್, ಬೆಳ್ಕೆ (96.48%), ಮಾರುಕೇರಿಯ ಎಸ್‌ಪಿ ಪ್ರೌಢಶಾಲೆಯ ಪ್ರಸಾದ್ ಶಂಕರ ಶೆಟ್ಟಿ (96.48%) ಮತ್ತು ಅಕ್ಷತಾ ಜಟ್ಟಪ್ಪ ನಾಯ್ಕ ಸರ್ಕಾರಿ ಪ್ರೌಢಶಾಲೆ, ಬೆಳ್ಕೆ (96.32%) ಗಳಿಸಿದ್ದಾರೆ‌.

ಮೂವರು ಉರ್ದು ಮಾಧ್ಯಮ ಟಾಪರ್‌ಗಳು: ಸರ್ಕಾರಿ ಪ್ರೌಢಶಾಲೆಯ ಅಬ್ದುಲ್ ಮನ್ನಾನ್ ಮೊಹಮ್ಮದ್ ಅಸ್ಲಂ ಬುಡ್ಜಿ, ಜಾಮಿಯಾ ಜಾಲಿ, ಹೆಬ್ಳೆ ಭಟ್ಕಳ (94.4%), ಸರ್ಕಾರಿ ಪ್ರೌಢಶಾಲೆಯ ಮೆಹಕ್ ನಾಜ್ ಖಾಲಿದ್, ನವಾಯತ್ ಕಾಲೋನಿ, ಭಟ್ಕಳ (88.8%) ಮತ್ತು ಸರ್ಕಾರಿ ಪ್ರೌಢಶಾಲೆಯ ಸಿಮ್ರಾ ಹರೀರಾ ಅಬ್ದುಲ್ ಕದಿರ್ ಡಂಗಿ ಶಾಲೆ, ಜಾಮಿಯಾ ಜಾಲಿ, ಹೆಬ್ಳೆ ಭಟ್ಕಳ (87.52%) ಫಲಿತಾಂಶ ಪಡೆದಿದ್ದಾರೆ.

ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮಾರ್ಚ್ 31, 2023 ರಿಂದ ಏಪ್ರಿಲ್ 15, 2023 ರವರೆಗೆ ನಡೆಸಲಾಗಿತ್ತು‌. ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 21ಆಗಿದ್ದು  ಪರೀಕ್ಷೆಗೆ ಮರು ಹಾಜರಾಗಲು ಇಚ್ಛಿಸುವವರು ಮೇ 15 ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share: