ಭಟ್ಕಳ:ಮುರ್ಡೇಶ್ವರದ ಗುಮ್ಮನಹಕ್ಕಲ ನಿವಾಸಿ ಹೋಟೆಲ್ ಉಧ್ಯಮಿ ದಿನೇಶ ಈರಪ್ಪ ನಾಯ್ಕ ಈತನು ತನ್ನ ಮನೆಗೆ ಹೋಗುವ ದಾರಿಯಲ್ಲಿ ಬೈಕ್ ಸ್ಕಿಡ್ಡಾಗಿ ಬಿದ್ದು ಮೃತ ಪಟ್ಟಿರುವ ಘಟನೆ ರವಿವಾರ ಬೆಳಿಗ್ಗೆ ತಿಳಿದು ಬಂದಿದೆ.ಶನಿವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಬೈಕಿನಲ್ಲಿ ಮುರ್ಡೇಶ್ವರದಿಂದ ಗುಮ್ಮನಹಕ್ಕಲಿನಲ್ಲಿರುವ ತನ್ನ ಮನೆಗೆ ಮರಳುವಾಗ ಮನೆಗೆ ಹೋಗುವ ದಾರಿಯಲ್ಲಿಯೇ ಬೈಕ್ ಸ್ಕಿಡ್ಡಾಗಿ ಪಕ್ಕದಲ್ಲಿ ಬಿದ್ದಿದ್ದು ತಲೆಗೆ ಗಾಯವಾಗಿದೆ ಎನ್ನಲಾಗಿದೆ. ರಾತ್ರಿಯಾಗಿದ್ದರಿಂದ ಯಾರೂ ಕೂಡಾ ನೋಡದೇ ಇರುವುದರಿಂದ ತೀವ್ರ ರಕ್ತಸ್ರಾವವಾಗಿ ಸಾವನ್ನಪಿರಬೇಕು ಎಂದು ಶಂಕಿಸಲಾಗಿದೆ. ರವಿವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈತ ಬಿದ್ದುಕೊಂಡಿರುವುದನ್ನು ಕಂಡು ಪೊಲೀಸ್ ಠಾಣೆಗೆ ತಿಳಿಸಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿಯೇ ಮೃತ ಪಟ್ಟ ಬಗ್ಗೆ ವೈದ್ಯರು ತಿಳಿಸಿದರು. ನಂತರ ಮುರ್ಡೇಶ್ವರದಲ್ಲಿಯೇ ಶವಪರೀಕ್ಷೆಯನ್ನು ನಡೆಸಲಾಯಿತು. ಈ ಕುರಿತು ಆತನ ಸಹೋದರ ಶ್ರೀಧರ ಮೋಹನ ನಾಯ್ಕ ಎನ್ನುವವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಅಪಫಾತದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.