ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಕಾರ್ಮಿಕರೇ ಕಾರ್ಮಿಕರಿಗಾಗಿ ನಿರ್ಮಿಸಿಕೊಂಡ ನಿಲಯಗಳು - ಸ್ವಾವಲಂಬನೆಗೊಂದು ಮಾದರಿ

ಬಂಟ್ವಾಳ: ಕಾರ್ಮಿಕರೇ ಕಾರ್ಮಿಕರಿಗಾಗಿ ನಿರ್ಮಿಸಿಕೊಂಡ ನಿಲಯಗಳು - ಸ್ವಾವಲಂಬನೆಗೊಂದು ಮಾದರಿ

Sat, 06 Feb 2010 15:19:00  Office Staff   S.O. News Service

ಬಂಟ್ವಾಳ ತಾಲೂಕಿನ ತುಂಬೆ ಸಮೀಪ ಕಾರ್ಮಿಕರಿಗಾಗಿ ಕಾರ್ಮಿಕರೇ ನಿರ್ಮಿಸುತ್ತಿರುವ ಕುಟೀರ ಮಾದರಿಯ ಗುಡಿಸಲುಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ..ತುಂಬೆಯಲ್ಲಿ ಆರಂಭಗೊಂಡಿರುವ ನೂತನ ವೆಂಟೆಡ್ ಡ್ಯಾಂನ ಕಾಮಗಾರಿಗಾಗಿ ನೆರೆಯ ಆಂದ್ರದಿಂದ ಬರುವ ಕಾರ್ಮಿಕರಿಗಾಗಿ ಈ ಗುಡಿಸಲುಗಳನ್ನು ನಿರ್ಮಿಸಲಾಗುತ್ತಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ಆಂದ್ರದ ಕಾರ್ಮಿಕ ನರಸಿಂಹ ಮತ್ತವರ ತಂಡ ಕುಟೀರ ನಿರ್ಮಾಣದಲ್ಲಿ ತೊಡಗಿದ್ದು ಇಪ್ಪತ್ತಕ್ಕೂ ಅಧಿಕ ಜೋಪಡಿಗಳ ನಿರ್ಮಾಣವಾಗಲಿದೆ.

 

ಜೋಪಡಿ ಹೇಗಿದೆ..?

 6-bnt2.jpg

 

 

ನೋಡಲು ಕುಟೀರಗಳಂತೆ ಕಾಣುವ ಇವುಗಳ ನಿರ್ಮಾಣಕ್ಕೆ ಬಿದಿರಿನ ಆಧಾರ ನೀಡಲಾಗಿದೆ. ಬಿದಿರಿನ ಕಡ್ಡಿಗಳಿಂದ ಅಸ್ಥಿಯನ್ನು ನಿರ್ಮಿಸಿ ಅದಕ್ಕೆ ಅತ್ತರಿಯ ಹೊದಿಕೆ ಹಾಸಲಾಗಿದೆ. ಒಳ ಹೊಕ್ಕಾಗ ಕಾಣಸಿಗುವ ಎರಡು ಕೋಣೆಗಳು ನಮ್ಮನ್ನು ದಿಗ್ಭ್ರಮೆ ಮೂಡಿಸುವಂತಿದ್ದು ಇಬ್ಬರು ಆರಾಮದಿಂದ ಮಲಗುವಷ್ಟು ಸ್ಥಳಾವಕಾಶವಿದೆ. ಅಡುಗೆ ಕೋಣೆಯಂತಿರುವ ಸ್ಥಳದಲ್ಲಿ ಬಿದಿರಿನ ಕಡ್ಡಿಗಳಿಂದ ಕಪಾಟುಗಳನ್ನು ನಿರ್ಮಿಸಲಾಗಿದ್ದು, ನೆಲವನ್ನು ಮರಳುಹಾಕಿ ನಯಮಾಡಲಾಗುತ್ತಿದೆ. ಬಿಸಿಲಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅತ್ತರಿ ನೆರವಾಗುತ್ತದೆ ಎನ್ನುವ ಕಾರ್ಮಿಕ ನರಸಿಂಹ ,ಮಳೆಯಿಂದ ಅತ್ತರಿ ಹಾಳಾಗದಂತೆ ಮತ್ತು ನೀರು ಒಳಗೆ ಬಾರದಂತೆ ಪ್ಲಾಸ್ಟಿಕ್ ಹೊದಿಕೆ ಹೊದಿಸಬೇಕು ಎನ್ನುತ್ತಾರೆ.

6-bnt3.jpg

6-bnt4.jpg 

ವೆಚ್ಚ ಎಷ್ಟು..?

ನರಸಿಂಹರು ಹೇಳುವ ಪ್ರಕಾರ ಬಿದಿರು ಕಡ್ಡಿಗಳು, ಒಂದಷ್ಟು ಅತ್ತರಿ ಹಾಳೆಗಳು,ಹಗ್ಗ ,ಕಬ್ಬಣದ ಸಲಾಕೆ,ಸ್ಥಳ ಇದ್ದರೆ ಸುಖೀ ಮನೆ ನಿರ್ಮಿಸಲು ಸಾಧ್ಯವಂತೆ..ಒಂದು ಜೋಪಡಿ ನಿರ್ಮಾಣಕ್ಕೆ ಹದಿನೈದರಿಂದ ಇಪ್ಪತ್ತು ಅತ್ತರಿ ಹಾಳೆಗಳು ಬೇಕು,ಪ್ರತೀ ಹಾಳೆಗೆ ನೂರು ರೂ ನಂತೆ ೨೦೦೦ ರೂ ಹಾಗೂ ಬಿದಿರು ಹಗ್ಗ ಎಲ್ಲಾ ಸೇರಿ ಒಟ್ಟು ಮೂರರಿಂದ ನಾಲ್ಕುಸಾವಿರ ವೆಚ್ಚದಲ್ಲಿ ನಿರ್ಮಿಸಬಹುದಾದ ಮನೆಯನ್ನು ಜಾಗರೂಕತೆಯಿಂದ ಕಾಯ್ದುಕೊಂಡಲ್ಲಿ ಮೂರು ವರ್ಷದ ಬಾಳಿಕೆ ಗ್ಯಾರಂಟಿ ಎಂಬುದು ನರಸಿಂಹರ ದಿಟ್ಟನುಡಿ.

 

ಬಾಡಿಗೆ ಮನೆಗಳು ಕಿರಿಕಿರಿಯಿಲ್ಲದೆ ಪರಿಸರ ಸ್ನೇಹಿಯಾಗಿರುವ ಇಂತಹ ಕುಟೀರಗಳು ಕಾಂಕ್ರೀಟ್ ಮನೆಗಳ ನಡುವೆ ಅಪರೂಪಕ್ಕೊಮ್ಮೆ ಕಂಡಾಗ ಎಲ್ಲರ ಹುಬ್ಬೇರುವುದು ಸಹಜ . ಆದರೂ ಬೆಂಕಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡಿದ್ದರೆ ಇಂತಹ ಕಾರ್ಮಿಕ ನಿಲಯಗಳು ನಿಜಕ್ಕೂ ಸುಖೀಗೃಹ ಅಲ್ಲವೇ...?


Share: