ಅಂಕೋಲಾ : ಬೆಳಂಬಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ 12 ಮೀನುಗಾರರನ್ನ ರಕ್ಷಿಸಿದ ಘಟನೆ ನಡೆದಿದೆ.
ಚಂದ್ರಾವತಿ ಖಾರ್ವಿ ಎಂಬುವವರಿಗೆ ಸೇರಿದ ಪರ್ಶಿಯನ್ ಬೋಟ್ ಮುಳುಗಿದ್ದು, ಅಬ್ಬರದ ಅಲೆಗೆ ಬೋಟಿನ ಫೈಬರ್ ಒಡೆದು ನೀರು ಬೋಟಿನೊಳಗೆ ತುಂಬಿದೆ. ಬಳಿಕ ಸಮುದ್ರದಲ್ಲಿ ಬೋಟು ಮುಳುಗಿದೆ. ಬೋಟಿನಲ್ಲಿದ್ದ ಮೀನುಗಾರರನ್ನ ಇನ್ನೊಂದು ಬೋಟ್ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಘಟನೆಯಿಂದ ಸುಮಾರು ಒಂದುವರೆ ಕೋಟಿಗೂ ಹೆಚ್ಚು ಹಾನಿ ಅಂದಾಜಿಸಲಾಗಿದೆ.