ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆರಳಚ್ಚುಗಾರ ಮತ್ತು ದಲಾಯತ್ ಹುದ್ದೆಗೆ ಅರ್ಜಿ ಆಹ್ವಾನ

ಬೆರಳಚ್ಚುಗಾರ ಮತ್ತು ದಲಾಯತ್ ಹುದ್ದೆಗೆ ಅರ್ಜಿ ಆಹ್ವಾನ

Sat, 19 Aug 2023 07:29:08  Office Staff   S O News

ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಆಡಳಿತ ಸಹಾಯಕ, ಬೆರಳಚ್ಚುಗಾರ ಮತ್ತು ದಲಾಯತ್ ಹುದ್ದೆಗೆ ಗುತ್ತಿಗೆ ಮತ್ತು ಸಂಪೂರ್ಣವಾಗಿ ತಾತ್ಕಾಲಿಕ ಆಧಾರದ ಮೇಲೆ ಆರು ತಿಂಗಳ ಅವಧಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಡಳಿತ ಸಾಹಾಯಕ ಬೆರಳಚ್ಚುಗಾರ ಹುದ್ದೆಗೆ ಯಾವುದೇ ಪದವಿ ಹಾಗೂ ಹಿರಿಯ ಶ್ರೇಣಿ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಉತ್ತೀರ್ಣ ಹೊಂದಿರಬೇಕು ಸಂದರ್ಶನದ ಸಮಯ ಸೆ.24 ರಂದು ಬೆಳಗ್ಗೆ 10 ಗಂಟೆಗೆ ಹಾಗೂ ದಲಾಯತ್ ಹುದ್ದೆಗೆ ಕನಿಷ್ಠ, ಎಸ್‍ಎಸ್‍ಎಲ್‍ಸಿ, ಗರಿಷ್ಠ ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸೆ.24 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಪ್ರತ್ಯೇಕವಾಗಿ ನೋಟಿಸು ಅಥವಾ ಪತ್ರವನ್ನು ಕಳುಹಿಸಲಾಗುವದಿಲ್ಲ. ಸಂಪೂರ್ಣ ಬಯೋ ಡೇಟಾ ಮೊಬೈಲ್ ಸಂಖ್ಯೆ ಮತ್ತು ಮಾಕ್ರ್ಸ್ ಕಾರ್ಡ್‍ನ ಹಾಗೂ ಇತರೆ ದಾಖಲಾತಿಗಳ ದೃಢೀಕೃತ ಪ್ರತಿಗಳೊಂದಿಗೆ ಎರಡು ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು, ಅವುಗಳಲ್ಲಿ ಒಂದನ್ನು ಅರ್ಜಿಯ ಮೇಲ್ಭಾಗದಲ್ಲಿ ಅಂಟಿಸಬೇಕು ಈ ರೀತಿ ವಿವರವಾಗಿ ಭರ್ತಿ ಮಾಡಿದ ಅರ್ಜಿಗಳು ಸೆ.15 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಚೇರಿ ಎಂ.ಜಿ.ರಸ್ತೆ, ಕಾರವಾರ -581301 ಗೆ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಸಂದರ್ಶನದ ದಿನಾಂಕವನ್ನು ರದ್ದುಗೊಳಿಸಿದರೆ ಹಾಗೂ ಮುಂದೂಡಿದರೆ, ಅದರ ಸೂಚನೆಯನ್ನು ಕಛೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯಸದರ್ಶಿ ರೇಣುಕಾ ರಾಯ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: