ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಾಜ್ಯದ ರಾಷ್ಟ್ರೀಯ ಹೆದ್ದಾರಿ - ಪ್ರತಿದಿನ ಇಪ್ಪತ್ತು ಕಿ.ಮೀ ಅಭಿವೃದ್ಧಿಪಡಿಸಲು ಕ್ರಮ - ಕಮಲನಾಥ್

ಬೆಂಗಳೂರು: ರಾಜ್ಯದ ರಾಷ್ಟ್ರೀಯ ಹೆದ್ದಾರಿ - ಪ್ರತಿದಿನ ಇಪ್ಪತ್ತು ಕಿ.ಮೀ ಅಭಿವೃದ್ಧಿಪಡಿಸಲು ಕ್ರಮ - ಕಮಲನಾಥ್

Sat, 23 Jan 2010 03:11:00  Office Staff   S.O. News Service
ಬೆಂಗಳೂರು, ಜನವರಿ 22:  ರಾಷ್ಟ್ರೀಯ ಹೆದ್ದಾರಿಯನ್ನು ಪ್ರತಿ ದಿನ 20 ಕಿ.ಮೀ. ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಂದ್ರ ಭೂಸಾರಿಗೆ ಖಾತೆ ಸಚಿವ ಕಮಲನಾಥ್ ಹೇಳಿದ್ದಾರೆ.  

ನಗರದಲ್ಲಿ ಇಂದು ರಾಷ್ಟ್ರದ ಅತಿ ಉದ್ದದ ೨ನೇ ಮೇಲುಸೇತುವೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರತಿವರ್ಷ ೭೦೦೦ ಕಿ.ಮೀ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.  ಮುಂದಿನ ೪ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಸ್ತೀರ್ಣವನ್ನು ಧ್ವಿಗುಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 

ಬೆಂಗಳೂರು ಮೆಟ್ರೋ ಕಾಮಗಾರಿಗೆ ಕೆಲವು ವಿನ್ಯಾಸವನ್ನು ಅಲ್ಪ ಪ್ರಮಾಣದಲ್ಲಿ ಬದಲಾವಣೆಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ.  ಈ ಬಗ್ಗೆ ಪರಿಶೀಲನೆ ಮಾಡಿ ಕಾಮಗಾರಿ ಚುರುಕು ಗೋಳಿಸುವಂತೆ ಅಗತ್ಯವಾದ ನೆರವನ್ನು ಬಿಡುಗಡೆ ಮಾಡುವುದಾಗಿ ಬರವಸೆ ನೀಡಿದರು. 

ದೇಶದ ಅಭಿವೃದ್ಧಿಗೆ ರಸ್ತೆ ಸಂಪರ್ಕ, ಹೆದ್ದಾರಿ ಅಭಿವೃದ್ಧಿ ಅತಿ ಮುಖ್ಯವಾಗಿದ್ದು, ರಾಜ್ಯ ಸರ್ಕಾರದ ಎಲ್ಲ ಪ್ರಸ್ತಾವನೆಗಳಿಗೂ ಅಗತ್ಯವಾದ ಮಂಜುರಾತಿ ನೀಡಲಾಗುವುದು ಎಂದು ತಿಳಿಸಿದರು. 






Share: