ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹಾಸ್ಯ ಕಾರ್ಯಕ್ರಮ ಮತ್ತೆ ರದ್ದು

ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹಾಸ್ಯ ಕಾರ್ಯಕ್ರಮ ಮತ್ತೆ ರದ್ದು

Sun, 21 Aug 2022 06:01:31  Office Staff   PTI


ಬೆಂಗಳೂರು: ಇಂದು ನಗರದಲ್ಲಿ ನಡೆಯಬೇಕಿದ್ದ ಕಾಮಿಡಿಯನ್ ಮುನಾವರ್ ಫಾರೂಕಿ ಅವರ  ಹಾಸ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಬೆಂಗಳೂರು ಪೊಲೀಸರು ಮತ್ತೆ ನಿರಾಕರಿಸಿದ್ದಾರೆ. 

ನಗರದ ಪುಟ್ಟೇನಹಳ್ಳಿ ಸಮೀಪವಿರುವ ಎಂಎಲ್ ಆರ್ ಕನ್ವೆಷನ್ ಸಭಾಂಗಣದಲ್ಲಿ ಮುನವ್ವರ್ ಫಾರೂಕಿ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ,  ಆಯೋಜಕರು ಕಾರ್ಯಕ್ರಮಕ್ಕೆ ಅನುಮತಿ ಪಡೆಯದ ಕಾರಣ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜೈ ಶ್ರೀರಾಮ ಸೇನೆಯು ಹಾಸ್ಯನಟ ಮತ್ತು ಸಂಘಟಕರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತ ಸಿ ಹೆಚ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿತ್ತು. ತನ್ನ ಶೋಗಳಲ್ಲಿ ಶ್ರೀ ರಾಮ ಮತ್ತು ಸೀತಾ ದೇವಿಯ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಫಾರುಕಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಂಘಟನೆಯು ತನ್ನ ದೂರಿನಲ್ಲಿ ಆರೋಪಿಸಿದೆ. ನವೆಂಬರ್ 2021 ರಲ್ಲಿ ಬೆಂಗಳೂರಿನಲ್ಲಿ  ಪ್ರದರ್ಶನ ನೀಡಲು ಹಾಸ್ಯನಟನಿಗೆ ಅನುಮತಿ ನಿರಾಕರಿಸಲಾಯಿತು


Share: