ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಂಗಳೂರಿನಲ್ಲಿ ಗ್ಯಾಸ್ ಲಾರಿ ಹರಿದು ಖಾಸಗಿ ಸುದ್ದಿ ವಾಹಿನಿ ವರದಿಗಾರ್ತಿ ಸಾವು….!

ಬೆಂಗಳೂರಿನಲ್ಲಿ ಗ್ಯಾಸ್ ಲಾರಿ ಹರಿದು ಖಾಸಗಿ ಸುದ್ದಿ ವಾಹಿನಿ ವರದಿಗಾರ್ತಿ ಸಾವು….!

Wed, 05 Oct 2022 00:23:57  Office Staff   S.O. News Service

ಬೆಂಗಳೂರು : ಬೆಂಗಳೂರಿನಲ್ಲಿ ಗ್ಯಾಸ್ ಲಾರಿ ಹರಿದು ಮಹಿಳೆ ಸಾವನ್ನಪ್ಪಿದ್ದಾರೆ. ಹೆಬ್ಬಾಳ ಫ್ಲೈ ಓವರ್ ಬಳಿ ಈ ಘಟನೆ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ್ತಿ ಸಿ.ಆರ್.ಲತಾ (46) ಮಹಿಳೆ ಎಂಬ ಮೃತ ದುರ್ದೈವಿ. ಪತಿ ರಾಜೇಂದ್ರ ಕುಮಾರ್ ಜೊತೆ ತೆರಳುತ್ತಿದ್ದ ಲತಾ, ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಾಗ ಲಾರಿ ಹರಿದು ಸಾವಿಗೀಡಾಗಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಆರ್.ಟಿ.ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕ ಸಿದ್ದಿಕ್  ಪೊಲೀಸರ ವಶಕ್ಕೆ ಪಡೆ್ದುಕೊಂಡಿದ್ದಾರೆ. ಈ ಘಟನೆ ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: