ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೂತ್ ವಿಜಯದಿಂದ ಯಾವುದೇ ಚುನಾವಣೆ ಗೆಲ್ಲಬಹುದು: ಭಟ್ಕಳ ಬೂತ್ ವಿಜಯ ಅಭಿಯಾನದಲ್ಲಿ ಸಚಿವ ಶ್ರೀನಿವಾಸ ಹೇಳಿಕೆ

ಬೂತ್ ವಿಜಯದಿಂದ ಯಾವುದೇ ಚುನಾವಣೆ ಗೆಲ್ಲಬಹುದು: ಭಟ್ಕಳ ಬೂತ್ ವಿಜಯ ಅಭಿಯಾನದಲ್ಲಿ ಸಚಿವ ಶ್ರೀನಿವಾಸ ಹೇಳಿಕೆ

Mon, 09 Jan 2023 01:39:50  Office Staff   so news

ಭಟ್ಕಳ: ಚುನಾವಣೆ ನಡೆಯುವುದು ಯಾವುದೇ ನಗರ, ಪಟ್ಟಣದಲ್ಲಿ ಅಲ್ಲ. ಪ್ರತಿ ಬೂತ್‌ಗಳಲ್ಲಿ ವಿಜಯಶಾಲಿಯಾದರೆ ಮಾತ್ರ ಯಾವುದೇ ಚುನಾವಣೆಯನ್ನು ಗೆಲ್ಲಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ತಾಲೂಕಿನ ಹೆಬಳೆಯಲ್ಲಿ ಬಿಜೆಪಿ ಬೂತ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಎನ್ನುವುದು ಬೂತ್ ಕೇಂದ್ರಿತವಾಗಿಯೇ ನಡೆಯುತ್ತಿರುವುದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರ ವಿಶ್ವಾಸವನ್ನು ಗಳಿಸಲು ಕಾರ್ಯಪ್ರವೃತ್ತರಾಗಬೇಕು. ಕಳೆದ ಬಾರಿ ಬಿಜೆಪಿಗೆ ಬಾರದ ಮತಗಳನ್ನು ಸೆಳೆಯುವುದರತ್ತ ಗಮನ ಹರಿಸಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ ಪಕ್ಷದ ಕಾರ್ಯಸಾಧನೆಯ ಬಗ್ಗೆ ಅರಿವು ಮೂಡಿಸಬೇಕು. ಪ್ರಧಾನ ಮಂತ್ರಿಗಳ ಭಾಷಣಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು. ಇದಕ್ಕಾಗಿ ಜ.2ರಿಂದ 12ರವರೆಗೆ ಬಿಜೆಪಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಯಾ ಕ್ಷೇತ್ರದ ಶಾಸಕರು, ಮಂಡಲದ ಅಧ್ಯಕ್ಷರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೇರೆ ಕಡೆಗೆ ತೆರಳದೇ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಪಕ್ಷದ ಸಂಸದರಿಗೆ ಪ್ರಧಾನಿ ಕಾರ್ಯಾಲಯದಿಂದಲೇ ಸಂದೇಶ ಕಳುಹಿಸಲಾಗಿದೆ ಎಂದರು. ಶಾಸಕ ಸುನಿಲ್ ನಾಯ್ಕ
ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ ಮಾತನಾಡಿದರು. ಉತ್ತರಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಹಿರಿಯ ಧುರೀಣರಾದ ಅಚ್ಯುತ್ ಪ್ರಭು ಹಾಗೂ ಎಮ್.ಎ.ಹೆಬಳೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಬಿಜೆಪಿ ಹಿಂದುಳಿದ ವಿಭಾಗದ ಜಿಲ್ಲಾ ಅಧ್ಯಕ್ಷ ರವಿ ನಾಯ್ಕ ಜಾಲಿ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮುಕುಂದ ನಾಯ್ಕ, ಹೆಬಳೆ ಗ್ರಾಮ ಪಂಚಾಯತ ಅಧ್ಯಕ್ಷೆ ಕುಪ್ಪು ಗೊಂಡ, ಉಪಾಧ್ಯಕ್ಷ ಮಾದೇವಿ ನಾಯ್ಕ, ಈರಪ್ಪ ನಾಯ್ಕ, ನಾಗರಾಜ ದೇವಡಿಗ ಮತ್ತಿತರರು ಉಪಸ್ಥಿತರಿದ್ದರು. ಭಟ್ಕಳ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಭಾಸ್ಕರ ವೈಮನ ಕಾರ್ಯಕ್ರಮ ನಿರೂಪಿಸಿದರು.ಶ್ರೇಯಾ ಮಹಾಲೆ
ಪ್ರಾರ್ಥನೆ ಮಾಡಿದರು.


Share: