ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಿಹಾರ: ನಕಲಿ ಮದ್ಯ ಸೇವನೆ ಒಂಭತ್ತು ಜನರ ಸಾವು

ಬಿಹಾರ: ನಕಲಿ ಮದ್ಯ ಸೇವನೆ ಒಂಭತ್ತು ಜನರ ಸಾವು

Sat, 06 Aug 2022 16:13:53  Office Staff   Vb

ಪಟ್ನಾ: ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯವನ್ನು ಸೇವಿಸಿ ಒಂಭತ್ತು ಜನರು ಮೃತಪಟ್ಟಿದ್ದು, ಇತರ 17 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. 

ಬಿಹಾರದಲ್ಲಿ ಎಪ್ರಿಲ್ 2016ರಿ೦ದ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆಯಾದರೂ, ರಾಜ್ಯದಲ್ಲಿ ನಕಲಿ ಮದ್ಯ ಸೇವಿಸಿ ಜನರು ಸಾವನ್ನಪ್ಪುವ ಮತ್ತು ಅಸ್ವಸ್ಥಗೊಳ್ಳುವ ಘಟನೆಗಳು ವರದಿಯಾಗುತ್ತಲೇ ಇವೆ.

ನಕಲಿ ಮದ್ಯವನ್ನು ಸೇವಿಸಿದ್ದ ನತದೃಷ್ಟರಲ್ಲಿ ಹೆಚ್ಚಿನವರು ಮಾಕರ್‌ ಮತ್ತು ಭೆಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಗಳ ವಿವಿಧ ಗ್ರಾಮಗಳಿಗೆ ಸೇರಿದ್ದು, ಇವರೆಲ್ಲ ಧನುಕಾ ಟೋಲಿ ಗ್ರಾಮದಲ್ಲಿ ಈ ನಕಲಿ ಮದ್ಯವನ್ನು ಖರೀದಿಸಿದ್ದರು ಎನ್ನಲಾಗಿದೆ.

ಪ್ರಸ್ತುತ ಛಾಪ್ರಾದ ಸದರ ಆಸ್ಪತ್ರೆಯಲ್ಲಿ 11 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇತರ ಹಲವರು ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ.


Share: