ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ವೆನ್ಲಾಕ್ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ:

ಉಡುಪಿ: ವೆನ್ಲಾಕ್ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ:

Sat, 17 Oct 2009 03:05:00  Office Staff   S.O. News Service
ಉಡುಪಿ, ಅ.16: 150 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಲು ಉದ್ದೇಶಿಸಿರುವ ಸರಕಾರ ಬಡ ರೋಗಿಗಳಿಂದ ಚಿಕಿತ್ಸಾ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ  ಎಸ್‌ಎಫ್‌ಐ ಹಾಗೂ ಡಿವೈ‌ಎಫ್‌ಐ ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಸಿತು.

ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿಪಿ‌ಎಲ್ ಕಾರ್ಡು ಹೊಂದಿರದ ಪ್ರತಿಯೊಬ್ಬ ರೋಗಿಯೂ ಪ್ರತಿಯೊಂದು ಬಳಕೆಗೂ ಶುಲ್ಕ ಪಾವತಿಸಬೇಕೆಂಬ ನೀತಿಯನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಬಡ ಜನರು ತೀವ್ರ ತೊಂದರೆಗೊಳಗಾಗುವರು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬಡತನ ರೇಖೆಗಿಂತ ಕೆಳಗಿನ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದೆಂದು ಸರಕಾರ ಸುತ್ತೋಲೆಯಲ್ಲಿ ತಿಳಿಸಿದ್ದರೂ, ಈಗಿನ ಸರಕಾರದ ಬಿಪಿ‌ಎಲ್ ನೀತಿಯ ಮಾನದಂಡದಿಂದಾಗಿ ಹೆಚ್ಚಿನ ಬಡಜನರಿಗೆ ಬಿಪಿ‌ಎಲ್ ಚೀಟಿ ಪಡೆಯಲು ಸಾಧ್ಯವಾಗಿಲ್ಲ. ಖಾಸಗಿ ಆಸ್ಪತ್ರೆಗಳ ವಿಪರೀತ ಶುಲ್ಕವನ್ನು ಭರಿಸಲಾಗದ ಬಡ ರೋಗಿಗಳಿಗೆ  ವೆನ್ಲಾಕ್ ಜಿಲ್ಲಾಸ್ಪತ್ರೆ  ಆಶಾಕಿರಣವಾಗಿತ್ತು. ಆದರೆ ಈಗ ಅದೂ ದುಬಾರಿಯಾಗಿ ಪರಿಣಮಿಸಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಈಗ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಮತ್ತು ಶವ ಪರೀಕ್ಷಾ ವಿಭಾಗಗಳನ್ನು ಖಾಸಗಿಯವರಿಗೆ ನೀಡಿರುವುದರಿಂದ ನಿಧಾನವಾಗಿ ಆಸ್ಪತ್ರೆಯನ್ನು ಖಾಸUಕರಣಗೊಳಿಸುವ ಸಂಶಯ ಮೂಡಿದೆ. ಶುಲ್ಕ ವಸೂಲಿಯ ನೀತಿಯಿಂದ ಅವಿಭಜಿತ ದ.ಕ.ಜಿಲ್ಲೆಯ ಬಡ ಜನರಿಗೆ ತೊಂದರೆಯಾಗಿದೆ.

ಸರಕಾರ ಶೀಘ್ರವೇ ಖಾಸUಕರಣ ಹಾಗೂ ಬಡಜನರಿಗೆ ಹೊರೆಯಾಗಿರುವ ಶುಲ್ಕ ನೀತಿಯನ್ನು ಕೈಬಿಡಬೇಕೆಂದು ಡಿವೈ‌ಎಫ್‌ಐ ಹಾಗೂ ಎಸ್‌ಎಫ್‌ಐ ಉಡುಪಿ ಜಿಲ್ಲಾ ಸಂಚಾಲಕ ಸಮಿತಿ ಆಗ್ರಹಿಸಿದೆ.

ಇಂದಿನ ಪ್ರತಿಭಟನೆಯಲ್ಲಿ ಡಿವೈ‌ಎಫ್‌ಐನ ರಾಜ್ಯ ಸಮಿತಿಯ ಸದಸ್ಯ ಕವಿರಾಜ್ ಎಸ್., ಸುರೇಶ್ ಕಲ್ಲಗಾರ, ಎಸ್‌ಎಫ್‌ಐನ ರವಿರಾಜ್ ಪಡುಕೋಣೆ, ಎಸ್.ಸುಬ್ರಹ್ಮಣ್ಯ ಪಡುಕೋಣೆ, ರಾಜೇಶ್ ವಡೇರ ಹೋಬಳಿ, ಹರ್ಷ, ಣಾ ಶೆಟ್ಟಿ, ಮಾಧವಿ ಮುಂತಾದವರು ಭಾಗವಹಿಸಿದ್ದರು.

Share: