ದಾವಣಗೆರೆ : ಹೊನ್ನಾಳಿ ತಾಲ್ಲೂಕು ಅಬಕಾರಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್‍ಗಳು ಧೂಮಪಾನ ಮುಕ್ತ ಮಾಡುವ ನಿಟ್ಟಿನಲ್ಲಿ ತಂಬಾಕು ದಾಳಿ ಕೈಗೊಳ್ಳಲಾಯಿತು.
ಮಾಲೀಕರಿಗೆ ಕೋಟ್ಪಾ-2003 ರ ಕಾಯ್ದೆ ಅನ್ವಯ ಕಡ್ಡಾಯವಾಗಿ ಧೂಮಪಾನ ನಿಷೇಧಿತ ಪ್ರದೇಶ ಎಂಬ ನಾಮಫಲಕವನ್ನು ಅಳವಡಿಸಲು ಮತ್ತು ಯಾವುದೇ ರೀತಿಯ ಧೂಮಪಾನಕ್ಕೆ ಉತ್ತೇಜಿಸುವ ವಸ್ತುಗಳಾದ ಬೆಂಕಿಪೊಟ್ಟಣ, ಆ್ಯಶ್ ಟ್ರೇ, ಲೈಟರ್‍ಗಳನ್ನು ಬಾರ್‍ಗಳ ವ್ಯಾಪ್ತಿಯಲ್ಲಿ ಸರಬರಾಜು ಮಾಡದಂತೆ ಸೂಚಿಸಲಾಗಿದೆ.
ಸೆಕ್ಷನ್-4 ರ ಅಡಿಯಲ್ಲಿ 20 ಪ್ರಕರಣ 4000 ರೂ ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರು ಧೂಮಪಾನ ನಿಷೇಧದ ನಾಮಫಲಕವನ್ನು ಕಟ್ಟು-ನಿಟ್ಟಾಗಿ ಪ್ರದರ್ಶಿಸಲು ಹಾಗೂ ಅಳವಡಿಸಲು ತಂಡ ಸೂಚಿಸಿತು.
ತಂಬಾಕು ತನಿಖಾ ತಂಡದಲ್ಲಿ ಸವಳಂಗ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಬಸವೇಶ್, ಜಿಲ್ಲಾ ಸಲಹೆಗಾರರ ಸತೀಶ್ ಕಲಹಾಳ್, ಅಬಕಾರಿ ಉಪ ನಿರೀಕ್ಷಕ ಶ್ರೀಧರ್, ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್ ಸಿ ಎಂ. ಮತ್ತು ಅಬಕಾರಿ ಕಾನಸ್ಟೆಬಲ್ ಖಂಡೋಜಿರಾವ್, ಸಹಾಯಕ ಕೃಷ್ಣ ಇತರರು ಹಾಜರಿದ್ದರು.