ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಾರೀ ಮಳೆ :ನಾಳೆ ಜುಲೈ 24ರಂದು ಶಾಲಾಕಾಲೇಜುಗಳಿಗೆ ರಜೆ.

ಬಾರೀ ಮಳೆ :ನಾಳೆ ಜುಲೈ 24ರಂದು ಶಾಲಾಕಾಲೇಜುಗಳಿಗೆ ರಜೆ.

Mon, 24 Jul 2023 04:46:11  Office Staff   SO News

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಬಾರೀ ಮಳೆ ಹಿನ್ನೆಲೆಯಲ್ಲಿ  ಶಾಲಾ ಕಾಲೇಜುಗಳ ರಜೆ ಘೋಷಣೆ ಮಾಡಲಾಗಿದೆ. 

ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯ ಅಂಗನವಾಡಿಯಿಂದ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಹಲವೆಡೆ ರಸ್ತೆ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತೆಯಾಗಿ ರಜೆ ನೀಡಲಾಗಿದೆ‌.


Share: