• ಹಳೆ ಬಸ್ ನಿಲ್ದಾಣದ ಬಳಿಯ ಮೈದಾನದಲ್ಲಿ ಬೃಹತ್ ಸಮಾವೇಶ
ಭಟ್ಕಳ: ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ಕುಮಾರ್ ಸ್ವಾಮಿ ನೇತೃತ್ವದಲ್ಲಿ ಆರಂಭಗೊAಡಿರುವ “ಪಂಚರತ್ನ ಯಾತ್ರೆ ಫೆ.೯ ರಂದು ಭಟ್ಕಳ ತಲುಪಲಿದ್ದು ಅಂದು ಸಂಜೆ ೬ಗಂಟೆಗೆ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಟಿಕೇಟ್ ಆಕಾಂಕ್ಷಿ ಇನಾಯತುಲ್ಲಾ ಶಾಬಂದ್ರಿ ಹೇಳಿದ್ದಾರೆ.
ಅವರು ಸೋಮವಾರ ಸಂಜೆ ಜೆ.ಡಿ.ಎಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಫೆ.೯ರಂದು ಉ.ಕ ಜಿಲ್ಲೆಗೆ ಆಗಮಿಸಲಿರುವ ಪಂಚರತ್ನ ಯಾತ್ರೆ ಅಂದು ಸಂಜೆ ೩ಗಂಟೆಗೆ ಹೊನ್ನಾವರ ತಲುಪಲಿದ್ದು, ಕಾಸರಕೋಡು, ಅಪ್ಸರಕೊಂಡ, ಗುಣವಂತೆ, ಮಂಕಿ, ಮುರುಡೇಶ್ವರ, ಬಸ್ತಿ, ಶಿರಾಲಿ ಮಾರ್ಗವಾಗಿ ಭಟ್ಕಳ ತಲುಪಲಿದೆ. ಸಂಜೆ ೬ಗಂಟೆಗೆ ಬೃಹತ್ ಸಮಾವೇಶ ನಡೆಯಲಿದ್ದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಭಟ್ಕಳದಲ್ಲಿ ಹಲವಾರು ತಿಂಗಳಿAದ ಮೊಗೇರ್ ಸಮಾಜದವರು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದು ಅವರ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಗೊಂಡ ಸಮುದಾಯವರು ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೇವಲ ಕುಮಾರ್ ಸ್ವಾಮಿಯವರ ಬಳಿ ಇದ್ದು ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಕೊಂಡು ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಿದ್ದಾರೆ ಎಂದು ಹೇಳಿದ ಅವರು, ಭಟ್ಕಳ ಕ್ಷೇತ್ರದಲ್ಲಿ ಈಗಾಗಲೆ ಹಲವು ಶಾಸಕರು ಇಲ್ಲಿನ ಅಭಿವೃದ್ಧಿಗಾಗಿ ಏನನ್ನೂ ಮಾಡದೆ ವಿಫಲರಾಗಿದ್ದು ಜನರು ಹೊಸ ಮುಖ ಬಯಸುತ್ತಿದ್ದಾರೆ. ಮತದಾರರು ತಮಗೊಂದು ಅವಕಾಶ ಕೊಟ್ಟರೆ ನಿಮ್ಮ ಮನೆಮಗನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದು ತಿಳಿಸಿದರು.
ಭಟ್ಕಳ ಹೊನ್ನಾವರ ತಾಲೂಕಿನಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು ಜೀವಂತವಾಗಿವೆ. ಭಟ್ಕಳದ ಶರಾಬಿ ಹೊಳೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಯಾವುದೇ ಗಮನಹರಿಸದ ಹಾಲಿ, ಮಾಜಿ ಶಾಸಕರನ್ನು ಜನ ನೋಡಿಯಾಗಿದೆ. ಈಗ ನನಗೊಂದು ಅವಕಾಶ ಕೊಟ್ಟು ನೋಡಿ ಎಂದು ಅವರು ವಿನಂತಿಸಿಕೊAಡಿದ್ದಾರೆ.
ಭಟ್ಕಳ ವಿಧಾನಸಭಾ ಕ್ಷೇತ್ರದ ಎಲ್ಲ ಸಮಸ್ಯೆಗಳ ಕುರಿತಂತೆ ಮಾಜಿ ಮುಖ್ಯ ಮಂತ್ರಿ ಕುಮಾರ್ ಸ್ವಾಮಿಯವರ ಗಮನ ಸೆಳೆಯಲೆಂದೇ ಕೇವಲ ಹೊನ್ನಾವರಕ್ಕೆ ಸೀಮಿತವಾಗಿದ್ದ ಪಂಚರತ್ನ ಯಾತ್ರೆಯನ್ನು ಭಟ್ಕಳದ ವರೆಗೆ ಬರುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಫೆ.೯ ರಂದು ಯಾತ್ರೆ ಬರಲಿದೆ. ಇಲ್ಲಿನ ಮೊಗೇರ್, ಗೊಂಡ ಸಮುದಾಯದ ಸಮಸ್ಯೆ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳ ಕುರಿಂತೆ ಅವರ ಗಮನ ಸೆಳೆಯಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಜೆ.ಡಿ.ಎಸ್. ಯುವ ಮುಖಂಡ ಪಂಡುನಾಯ್ಕ, ಕೃಷ್ಣಾನಂದಾ ಪೈ, ಗಣಪತಿ ಭಟ್, ಝೈನುಲ್ ಆಬಿದೀನ್, ದ್ಯಾವಯ್ಯ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಅಧ್ಯಕ್ಷರ ಅನುಪಸ್ಥಿತಿ: ಪತ್ರಿಕಾಗೋಷ್ಟಿಯಲ್ಲಿ ಇತ್ತಿಚೆಗೆ ನೇಮಕೊಂಡಿರುವ ತಾಲೂಕು ಜೆ.ಡಿ.ಎಸ್ ಅಧ್ಯಕ್ಷ ನ್ಯಾಯವಾದಿ ರಾಜವರ್ಧನ ನಾಯ್ಕ ಅನುಪಸ್ಥಿತಿ ಎದ್ದು ಕಾಣುತ್ತಿದ್ದು ಜೆ.ಡಿ.ಎಸ್ ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎನ್ನುವುದನ್ನು ತೋರಿಸಿ ಕೊಟ್ಟಂತಿತ್ತು.
ಕುಮಾರ್ ಸ್ವಾಮಿ ಪಂಚರತ್ನ ಯಾತ್ರೆಯನ್ನು ಸ್ವಾಗತಿಸುವ ಸಂಬAಧ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಜೆ.ಡಿ.ಎಸ್. ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಅಂತರವನ್ನು ಕಾಯ್ದುಕೊಂಡಿದ್ದು ಯಾವ ಕಾರಣಕ್ಕಾಗಿ ಎಂಬುದು ರಾಜಕೀಯ ವಲಯದಲ್ಲೀಗ ಚರ್ಚೆಗೆ ಗ್ರಾಸವಾಗಿದೆ.