ಭಟ್ಕಳ:ಚೇಂಬರ್ ಕಾಮಗಾರಿ ನಡೆಸದೆ ಎಸ್.ಟಿ.ಪಿ. ಘಟಕ ನಿರ್ಮಾಣ ಮಾಡಲು ಸ್ಥಳ ಮಂಜೂರಿ ಪ್ರಸ್ತಾವನೆಗೆ ಬಂದಿದ್ದ ನೀರು ಹಾಗೂ ಒಳಚರಂಡಿ ನಿರ್ವಹಣಾ ಮಂಡಳಿಯ ಕಿರಿಯ ಅಭಿಯಂತರನ್ನು ಪುರಸಭಾ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.
ಪುರಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪುರಸಭಾ ವ್ಯಾಪ್ತಿಯಲ್ಲಿ ನಡೆಯತ್ತೀರುವ 200 ಕೋಟಿ ಒಳಚರಂಡಿ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನೀರು ಹಾಗೂ ಒಳಚರಂಡಿ ನಿರ್ವಹಣಾ ಮಂಡಳಿಯ ಕಿರಿಯ ಅಭಿಯಂತರ ಶಶಿಧರ ಹೆಗಡೆ ಗೌಸಿಯಾ ಸ್ಟೀಟ ನಲ್ಲಿ ಖಾಸಗಿ ಜಮೀನಿನಲ್ಲಿ ಎಸ್.ಟಿ.ಪಿ ಘಟಕ ನಿರ್ಮಿಸಲು ಜಾಗ ಖರೀದಿಗೆ ಪುರಸಭೆಯವರ ಮಧ್ಯವರ್ತಿಯಾಗಬೇಕು ಎಂದು ಸಭೆಯ ಗಮನಕ್ಕೆ ತಂದಾಗ ಉಪಾಧ್ಯಕ್ಷ ಕೈಸರ್ ಮಾತನಾಡಿ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಶೇಕಡಾ 90ರಷ್ಟು ಕಾಮಗಾರಿ ಹಾಗೆ ಬಾಕಿ ಉಳಿದಿದೆ. ಈ ಹಿಂದೆ ಎಡಿಬಿಯಿಂದ ಮಾಡಿರುವ ಕಾಮಗಾರಿಯಿಂದ ಬಾವಿ ನೀರು ಕಲುಷಿತಗೊಂಡು ಜನರು ಈಗಲೂ ಪರಿತಪಿಸುತ್ತಿದ್ದಾರೆ. ಮೊದಲು ಹಳೆ ಚೇಂಭರ್ ಬದಲಾವಣೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ ಆ ನಂತರ ಎಸ್.ಟಿ ಪಿ ನಿರ್ಮಾಣಕ್ಕೆ ಜಾಗ ಮಂಜೂರಿ ಬಗ್ಗೆ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸೋಣಾ ಎಂದು ಹೇಳಿದರು.
ಪಟ್ಟಣದ ಪರಿಷ್ಕçತ ಮಹಾಯೋಜನೆಯನ್ನು ಸರ್ಕಾರಕ್ಕೆ ಕಳುಹಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಪುರಾತತ್ವ ಇಲಾಖೆಯ ಸ್ಮಾರಕಗಳಿಂದ ಕಟ್ಟಡ ಕಟ್ಟುವರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಯೋಜನೆಯ ನಕ್ಷೆಯಲ್ಲಿ ಕೆಲವು ಕಡೆ ಎರಡು ಮೂರು ರಸ್ತೆಗಳನ್ನು ತೋರಿಸಲಾಗಿದೆ. ಇದರ ಬಗ್ಗೆ ಸ್ಪಷ್ಟತೆ ನೀಡದೆ ಯೋಜನೆಗೆ ಅನುಮೋದನೆ ನೀಡಿದರೆ ಮುಂದೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ನಗರಾಭೀವೃದ್ದಿ ಅಧಿಕಾರಿಗಳು ನಮ್ಮ ವಾರ್ಡಿಗೆ ಬಂದು ವಿವರಣೆ ನೀಡಲಿ ಅಲ್ಲಿಯ ತನಕ ಪ್ರಸ್ತಾವನೆ ಕಳುಹಿಸುವುದು ಬೇಡಾ ಎಂದು ಸದಸ್ಯ ಅಲ್ತಾಫ ಖರೂರಿ ಹೇಳಿದರು.
ಬಹಿರಂಗ ಹರಾಜು ಮಾಡದೆ ಚೀಟಿ ಎತ್ತುವ ಮೂಲಕ ರಂಜಾನ್ ಅಂಗಡಿ ಮಳಿಗೆಗಳನ್ನು ನೀಡಿದ ಬಗ್ಗೆ ಸದಸ್ಯ ಶ್ರೀಕಾಂತ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರೀಯೆ ನೀಡಿದ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಕಳೆದ 18 ವರ್ಷಗಳಿಂದ ಇದೇ ರೀತಿ ರಂಜಾನ್ ಮಳಿಗೆ ಹರಾಜು ಮಾಡಲಾಗುತ್ತಿದೆ. ಇದಕ್ಕೆ ಆಕ್ಷೇಪಣೆ ಮಾಡುವುದು ಸರಿಯಲ್ಲ. ಹಾಗೆ ಪ್ರತಿಯೊಂದಕ್ಕೂ ಆಕ್ಷೇಪಣೆ ಸಲ್ಲಿಸುತ್ತಾ ಹೋದರೆ ಪುರಸಭೆ ಅಂಗಡಿ ಮಳಿಗೆಯನ್ನು 1 ಸಾವಿರ ರೂಪಾಯಿಗೆ ಬಾಡಿಗೆ ಪಡೆದು ಹೆಚ್ಚುವರಿ ಬಾಡಿಗೆಗೆ ಮಾರಿಕೊಂಡವರನ್ನು ನಾವು ಎಬ್ಬಿಸಬೇಕಾಗುತ್ತದೆ ಎಂದರು. ಕಾನೂನು ಎಲ್ಲರಿಗೂ ಒಂದೇ ರೀತಿ ಇರಲಿ ಎಂದಾದರೆ ಅದಕ್ಕೆ ನಾವು ಒಪ್ಪುತ್ತೇವೆ ಎಂದರು. ಇದೆ ವಿಷಯವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪುರಸಭಾ ವ್ಯಾಪ್ತಿಯಲ್ಲಿನ ಕೆರೆ ಹಾಗೂ ಉದ್ಯಾವನ ಅಭಿವೃದ್ದಿ ಬಗ್ಗೆ ಪ್ರಸ್ತಾವನೆ ಕಳಹಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶ್ರೀಕಾಂತ ನಾಯ್ಕ ಬಂದರ ರಸ್ತೆಯಲ್ಲಿರುವ ಸರ್ದಾರ ವಲ್ಲಬಾಯಿ ಉದ್ಯಾನವನ ಅಭಿವೃದ್ದಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಕಾಮಗಾರಿ ನಡೆದಿಲ್ಲ. ಗುತ್ತಿಗೆದಾರರು ಎಲ್ಲವನ್ನೂ ನುಂಗಿ ಹಾಕಿದ್ದಾರೆ. ಈಗ ಪ್ರಸ್ತಾವನೆ ಕಳಹಿಸುವಾಗ ಸಂಪೂರ್ಣ ಅಭಿವೃದ್ದಿಗೆ ಕಳುಹಿಸಿ ಚಿಕ್ಕಪುಟ್ಟ ಕಾಮಗಾರಿಗೆ ಬೇಡಾ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಇಮಶಾದ್, ಮುಖ್ಯಾಧಿಕಾರಿ ಎಂ.ಕೆ.ಸುರೇಶ, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತಿçÃ, ಇಂಜಿನೀಯರ್ ಉಮೇಶ ಮಡಿವಾಳ ಇದ್ದರು.