ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಿಯುಸಿಯಲ್ಲಿ ಅನುತ್ತೀರ್ಣ. ಕುಮಟಾದಲ್ಲಿ ವಿದ್ಯಾರ್ಥಿ ಸಾವು.

ಪಿಯುಸಿಯಲ್ಲಿ ಅನುತ್ತೀರ್ಣ. ಕುಮಟಾದಲ್ಲಿ ವಿದ್ಯಾರ್ಥಿ ಸಾವು.

Sun, 19 Jun 2022 04:59:27  Office Staff   SO News

ಕುಮಟಾ : ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣನಾದ  ಹಿನ್ನಲೆಯಲ್ಲಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ.

ಪ್ರಣಮ್ ಈಶ್ವರ್ ನಾಯ್ಕ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಎ.ವಿ ಬಾಳಿಗಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಣಮ್, ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದನು.  ಪಾಲಕರಿಗೆ ಇರುವ ಓರ್ವ ಮಗನಾಗಿದ್ದ.  ಶನಿವಾರ ಪ್ರಕಟಗೊಂಡಿದ್ದ ಪಿಯು ಫಲಿತಾಂಶ ನೋಡಿ ಗಾಬರಿಯಾಗಿದ್ದ ಎಂದು ಹೇಳಲಾಗಿದೆ.

ಇದರಿಂದ ‌ಬೇಸತ್ತ ವಿದ್ಯಾರ್ಥಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಕುಮಟಾ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Share: