ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೂ ವಹಿವಾಟು, ವರ್ಚುವಲ್ ಆಸ್ತಿ

ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೂ ವಹಿವಾಟು, ವರ್ಚುವಲ್ ಆಸ್ತಿ

Thu, 09 Mar 2023 21:55:10  Office Staff   Vb

ಹೊಸದಿಲ್ಲಿ: ಕ್ರೀಪ್ಟೂ ಕರೆನ್ಸಿ ವಹಿವಾಟು ಇನ್ನು ಮುಂದೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಯಲ್ಲಿ ಬರಲಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ಪ್ರಕಟಿಸಿದೆ.

ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು ಒಳಗೊಂಡು ವಹಿವಾಟಿನಲ್ಲಿ ಪಾಲ್ಗೊಳ್ಳುವುದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವ್ಯಾಪ್ತಿ ಯಲ್ಲಿ ಬರುತ್ತದೆ ಎಂದು ಗಝಟ್ ಅಧಿಸೂಚನೆ ಯಲ್ಲಿ ಸರಕಾರ ಹೇಳಿದೆ. ಇದು ಡಿಜಿಟಲ್ ಆಸ್ತಿಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲು ಸರಕಾರ ಕೈಗೊಂಡ ಇತ್ತೀಚಿನ ಕ್ರಮವಾಗಿದೆ.

ವರ್ಚುವಲ್ ಡಿಜಿಟಲ್ ಆಸ್ತಿಗಳ ವಿನಿಮಯ ಹಾಗೂ ವರ್ಗಾವಣೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ಹಾಗೂ ಫೋರೆಕ್ಸ್ ಉಲ್ಲಂಘನೆ ಪ್ರಕರಣಗಳ ತನಿಖೆಯನ್ನು ಕಡ್ಡಾಯವಾಗಿ ನಡೆಸಬೇಕಾಗಿರುವ ಜಾರಿ ನಿರ್ದೇಶನಾಲಯ ಕಾಯಿನ್‌ ಸ್ವಿಚ್ ಕುಬೇರ್ ಹಾಗೂ ವಾಝಿರ್ಕ್ಸ್ ವಿನಿಮಯ ಸೇರಿದಂತೆ ಈಗಾಗಲೇ ಹಲವು ಕ್ರಿಪ್ರೊ ಕಂಪೆನಿಗಳ ಕುರಿತು ತನಿಖೆ ನಡೆಸುತ್ತಿದೆ.


Share: