ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪತ್ರಕರ್ತ ಮನಮೋಹನ್ ನಾಯ್ಕರಿಗೆ ಮಾತೃವಿಯೋಗ

ಪತ್ರಕರ್ತ ಮನಮೋಹನ್ ನಾಯ್ಕರಿಗೆ ಮಾತೃವಿಯೋಗ

Sun, 29 Sep 2024 01:28:27  Office Staff   SOnews

ಭಟ್ಕಳ: ಭಟ್ಕಳ ತಾಲ್ಲೂಕು ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪತ್ರಕರ್ತ ಮನಮೋಹನ್ ನಾಯ್ಕ ಅವರ ತಾಯಿ, ಮಹಾದೇವಿ ಗಣಪತಿ ನಾಯ್ಕ (74), ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲಕಾಲದಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಮೂರು ದಿನಗಳ ಹಿಂದೆ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದರು.

ಮಹಾದೇವಿ ನಾಯ್ಕ ಅವರು ಪತಿ ನಿವೃತ್ತ ನೌಕರ ಗಣಪತಿ ನಾಯ್ಕ, ಪತ್ರಕರ್ತ ಮನಮೋಹನ್ ನಾಯ್ಕ ಸೇರಿದಂತೆ ಮೂವರು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಭಟ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಎಂ.ಆರ್.ಮಾನ್ವಿ, ಗೌರವ ಅಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಉಪಾಧ್ಯಕ್ಷ ವಿಷ್ಣುದೇವಾಡಿಗ, ಹಿರಿಯ ಪತ್ರಕರ್ತ ಸತೀಶ್ ಕುಮಾರ್ ನಾಯ್ಕ, ಮೋಹನ್ ನಾಯ್ಕ, ಇನಾಯತುಲ್ಲಾ ಗವಾಯಿ, ಅತಿಕುರು಼ರುಹ್ಮಾನ್ ಶಾಬಂದ್ರಿ ಸೇರಿದಂತೆ ಅನೇಕ ಪತ್ರಕರ್ತರು ಮತ್ತು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

 


Share: