ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಗಳೂರು: ಯುಗಾದಿ ಕೊಡುಗೆಯಾಗಿ ಮ೦ಗಳೂರು-ಮಣಿಪಾಲ ವೋಲ್ವೊ ಸಂಚಾರ ಆರ೦ಭ

ಮಂಗಳೂರು: ಯುಗಾದಿ ಕೊಡುಗೆಯಾಗಿ ಮ೦ಗಳೂರು-ಮಣಿಪಾಲ ವೋಲ್ವೊ ಸಂಚಾರ ಆರ೦ಭ

Sun, 14 Mar 2010 03:00:00  Office Staff   S.O. News Service

ಮಂಗಳೂರು, ಮಾ. ೧೩: ಯುಗಾದಿ ಕೊಡುಗೆಯಾಗಿ ಮಂಗಳೂರು-ಮಣಿಪಾಲ ನಡುವೆ ವೋ ಲ್ವೊ ಬಸ್ ಸಂಚಾರ ಆರಂಭಗೊಳ್ಳುವ ಸಾಧ್ಯತೆಗಳಿವೆ.

ಮಂಗಳೂರು -ಮಣಿಪಾಲ ನಡುವೆ ಇದೇ ಮೊದಲ ಬಾರಿಗೆ ಕೆ‌ಎಸ್‌ಆರ್‌ಟಿಸಿ ವೋಲ್ವೊ ಬಸ್ಸು ಸಂಚಾರವನ್ನು ಆರಂಭಿಸಲಿದೆ. ಸದ್ಯ ಆರು ಬಸ್ಸುಗಳಿಗೆ ಪರವಾನಿಗೆ ದೊರೆತಿದೆ.

ಬೆಳಗ್ಗೆ ೭.೩ರಿಂದ ಪ್ರತಿ ಗಂಟೆಗೊಂದರಂತೆ ವೋಲ್ವೊ ಬಸ್ಸುಗಳು ಮಂಗಳೂರು ಸ್ಟೇಟ್ ಬ್ಯಾಂ ಕ್ ಹಾಗೂ ಮಣಿಪಾಲದಿಂದ ಹೊರಡಲಿವೆ. ಸಂಜೆ ೬.೩೦ಕ್ಕೆ ಕೊನೆಯ ಬಸ್ಸು ಎರಡು ತಾಣ ಗಳಿಂದ ಹೊರಡಲಿದೆ ಎಂದು ಕೆ‌ಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮಿಂದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಬಸ್ಸುಗಳೂ ರಸ್ತೆಗಿಳಿಯಲು ಸಿದ್ಧವಾಗಿವೆ. ಉದ್ಘಾಟನಾ ಕಾರ್ಯ ಕ್ರಮಕ್ಕಾಗಿ ಸಚಿವರ ದಿನವನ್ನೂ ಎದುರು ನೋಡುತ್ತಿದ್ದೇವೆ. ಬಹುತೇಕ ಮಾ. ೧೬ ಅಥವಾ ೧೭ರಂದು ಬಸ್ಸು ಸಂಚಾರ ಆರಂಭಗೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ವಿವರಿಸಿ ದ್ದಾರೆ.

ಸದ್ಯ ಬೆಳಗ್ಗೆ ೭.೩೦ಕ್ಕೆ ಮೊದಲ ಬಸ್ಸು ಉಭಯ ತಾಣ ಗಳಿಂದ ಹೊರಡಲಿದೆ. ಮುಂದಿನ ದಿನ ಗಳಲ್ಲಿ ಬೆಳಗ್ಗೆ ೬.೩೦ಕ್ಕೆ ಬಸ್ಸುಗಳು ಹೊರಡಲಿವೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಕೆ‌ಎಸ್‌ಆರ್‌ಟಿಸಿ ಆರು ಮಿನಿ ಬಸ್ಸುಗಳನ್ನು ಮಂಗಳೂರು - ಉಡುಪಿ ನಡುವೆ ಆರಂಭಿ ಸಿತ್ತು. ಆದರೆ ಕಾರಣಾಂತರಗಳಿಂದ ಅವುಗಳ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಈಗ ಅದೇ ೬ ಪರವಾನಿಗೆಯನ್ನು ನವೀಕರಿಸಲಾಗಿದೆ. ಕೆ‌ಎಸ್‌ಆರ್‌ಟಿಸಿ ಬಸ್ಸು ಸಂಚಾರ ಆರಂಭಕ್ಕೆ ಖಾಸಗಿ ಬಸ್ಸು ಮಾಲಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರು - ಮಣಿಪಾಲ ನಡುವೆ ವೋಲ್ವೊ ಬಸ್ಸು ಆರಂಭಿಸಬೇಕೆಂದು ರಾಜ್ಯ ಸರಕಾರ ಪಟ್ಟು ಹಿಡಿದ ಕಾರಣ ಈಗ ಮತ್ತೆ ಕೆ‌ಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ಪ್ರಾರಂಭವಾಗುತ್ತಿದೆ.

 

ಸೌಜನ್ಯ: ಉದಯವಾಣಿ 


Share: