ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ನೇತ್ರಾವತಿ ನದೀ ತೀರಕ್ಕೆ ಆಗಮಿಸಿದ ವಿದೇಶಿ ಹಕ್ಕಿಗಳು

ಬಂಟ್ವಾಳ: ನೇತ್ರಾವತಿ ನದೀ ತೀರಕ್ಕೆ ಆಗಮಿಸಿದ ವಿದೇಶಿ ಹಕ್ಕಿಗಳು

Tue, 05 Jan 2010 02:50:00  Office Staff   S.O. News Service
ಬಂಟ್ವಾಳ, ಜನವರಿ 4:  ಬಂಟ್ವಾಳದ ನೇತ್ರವತಿ ನದಿಕಿನಾರೆಯಲ್ಲಿ ಕಳೆದ ಕೆಲದಿನಗಳಿಂದ ಬೀಡು ಬಿಟ್ಟಿರುವ ವಿದೇಶದ ವಲಸೆ ಹಕ್ಕಿಗಳ ಪ್ರಕೃತಿಪ್ರಿಯರ ಆಕರ್ಷಣೆಗೆ ಒಳಗಾಗಿದೆ...ನೀರಿನಲ್ಲಿ ಇವುಗಳು ಆಡುವ,ಒಡಾಡುವ,ಜಗಳವಾಡುವ ದೃಶ್ಯಗಳು ಇಲ್ಲಿ ನಿತ್ಯ ಕಂಡು ಬರುತ್ತಿದೆ. ಕೊಕ್ಕರೆಯಂತೆ ಬಿಳಿ ಬಣ್ಣ ಹೊಂದಿರುವ ಈ ಹಕ್ಕಿಗಳ ಅಗಲವಾದ ರೆಕ್ಕೆಯಲ್ಲಿ ಬೂದು ಮಿಶ್ರಿತ ಕಂದು ಬಣ್ಣವಿದೆ. ಕಿರಿದಾದ ಕೊಕ್ಕು ಇದನ್ನು ಕೊಕ್ಕರೆಗಿಂತ ಭಿನ್ನವಾಗಿಸಿದೆ. ಬಾತುಕೋಳಿUಳಂತೆ ನೀರಿನಲ್ಲಿ ಚಲಿಸುವ ಈಹಕ್ಕಿ ಗಿಡುಗನಂತೆ ಬಾನಂಗಳದಲ್ಲಿ ಗುಂಪುಗುಂಪಾಗಿ ಹಾರಬಲ್ಲುದು.. ಇವುಗಳ ಹೆಜ್ಜೆ ಗುರುತಿಗಳು ಮರಳಿನ ಮೇಲೆ ಅಚ್ಚೊತ್ತಿದೆ...

ಮಳೆಗಾಲ ಕಳೆದು ದಶಂಬರ್‌ನ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ನೇತ್ರಾವತಿ ನದಿ ಕಿನಾರೆಗೆ ಈ ಹಕ್ಕಿಗಳು ವಲಸೆ ಬರುತ್ತದೆ ಎನ್ನುವ ಸ್ಥಳೀಯ ನಿವಾಸಿ ಸಿದ್ದಿಕ್‌ರವರ ಪ್ರಕಾರ ಈಬಾರಿ ಚಳಿ ತಡವಾದಂತೆ ಇದರ ಆಗಮನವೂ ತಡವಾಗಿಯೇ ಆಗಿದೆಯಂತೆ. ದಿನವಿಡೀ ಈ ಹಕ್ಕಿಗಳ ಕಲರವ ನದಿತಟದಲ್ಲಿ ಕಾಣುತತಿದ್ದು, ಪ್ರಕಾಶ ಮಾನವಾದ ಸೂರ್‍ಯ ಕೆಂಪು ಬಣ್ಣಕ್ಕೆ ತಿರುಗಿ ಮರೆಯಾಗಲು ಅಣಿಯಾಗುತ್ತಿದ್ದಂತೆಯೇ ಈ ಹಕ್ಕಿಗಳ ಬಾನಂಗಳಕ್ಕೆ ಹಾರಿ ಮರೆಯಾಗುತ್ತಿದೆ.... ಇನ್ನೆಷ್ಟು ದಿನ ಈ ಹಕ್ಕಿಗಳು ನದಿ ತಟದಲ್ಲಿರುತ್ತದೆಯೋ ಗೊತ್ತಿಲ್ಲ.. ಅದು ಮತ್ತೆ ತೆರಳುವ ಮೊದಲು ಅದನ್ನು ನೋಡಿ ಆನಂದ ಪಟ್ಟರೇ ಚೆನ್ನ.

ಚಿತ್ರ, ವರದಿ: ಮೌನೇಶ ವಿಶ್ವಕರ್ಮ, ಬಂಟ್ವಾಳ


Share: