ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ

Thu, 01 Jun 2023 12:40:06  Office Staff   S O News

ಭಟ್ಕಳ: ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಯ್ಕಿಣಿ ಗ್ರಾಮದ ಬಾಕಡಕೇರಿ ಯಲ್ಲಿ ವರದಿಯಾಗಿದೆ.

ಮೃತ ಗುತ್ತಿಗೆದಾರನನ್ನು ದಿನೇಶ ತಂದೆ ಮಂಜಪ್ಪ ನಾಯ್ಕ 
28 ವರ್ಷ ಶಿರಾಲಿ ಮಣ್ಣಹೊಂಡ ನಿವಾಸಿ 
ಎಂದು ಗುರುತಿಸಲಾಗಿದೆ.

ರಸ್ತೆ ಮತ್ತು ಇನ್ನಿತರ ಕಾಮಗಾರಿಗಳ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು ಕೆಲಸಕ್ಕೆ ಬೆಳಿಗ್ಗೆ ಮನೆಯಿಂದ ಹೋದವನು ಮನೆಗೆ ಬಾರದೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ವಿಕೊಂಡು ಬಾಕಡಕೇರಿ ಸ್ಮಶಾನದ ಸಮೀಪ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆ ಯಲ್ಲಿ ಮೃತನ ಅಣ್ಣ ಸುಬ್ರಾಯ ನಾಯ್ಕ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡ ಪಿ.ಎಸ್.ಐ ಮಂಜುನಾಥ 
ಘಟನ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಮೃತ ದೇಹವನ್ನ ಮುರ್ಡೇಶ್ವರ ಆಸ್ಪತ್ರೆಗೆ ರವಾನಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ
ಕುಟುಂಬದವರಿಗೆ ನೀಡಿದ್ದು ಇನ್ನೂ ಪೋಲಿಸರ ತನಿಖೆಯಲ್ಲಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ.


Share: